ಬಂಟ್ವಾಳ : ಬಿ.ಸಿ.ರೋಡಿನ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಆಶ್ರಯದಲ್ಲಿ ನಡೆಯಲಿರುವ 47ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿಯ ನೂತನ ಅಧ್ಯಕ್ಷರಾಗಿ ಸತೀಶ್ ಭಂಡಾರಿ ಕುಲತಬೆಟ್ಟು ಆಯ್ಕೆಯಾಗಿದ್ದಾರೆ

ಬಿ ಸಿ ರೋಡಿನ ಶ್ರೀರಕೇಶ್ವರೀ ದೇವಸ್ಥಾನದಲ್ಲಿ ನಡೆದ ಸಮಿತಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಉಪಾಧ್ಯಕ್ಷರುಗಳಾಗಿ ಸುರೇಶ್ ಕುಮಾ‌ರ್ ಕೈಕಂಬ, ಭಾಸ್ಕರ ಟೈಲ‌ರ್ ಕಾಮಾಜೆ, ಚರಣ್ ಜುಮಾದಿಗುಡ್ಡೆ, ಕಾರ್ಯದರ್ಶಿಯಾಗಿ ಎಂ ಸತೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ಬಿ. ಮಹಾಕಾಳಿಬೆಟ್ಟು, ಪ್ರದೀಪ್ ಕೆ.ಎನ್.ಬಿ.ಸಿ ರೋಡು, ಕೋಶಾಧಿಕಾರಿಯಾಗಿ ಎನ್ ಶ್ರೀಧ‌ರ್ ಶೆಣೈ, ಸಹ ಕೋಶಾಧಿಕಾರಿಯಾಗಿ ಆಶಾ ಪಿ.ರೈ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕಿರಣ್ ಕುಮಾ‌ರ್, ಶ್ರೀಧ‌ರ್ ಅಲೆತ್ತೂರು, ನರೇಶ್ ಹೊಳ್ಳ ಕಲ್ಲಿಮಾರ್, ಶರತ್ ಕುಮಾರ್, ಪ್ರಣಾಮ್ ಅಜ್ಜಿಬೆಟ್ಟು, ಗೀತಾ ವೈ ಶೆಟ್ಟಿ, ಲಕ್ಷಣರಾಜ್, ಮಾಧವ ಕೈಕುಂಜೆ, ನವೀನ್ ಶೆಟ್ಟಿ ಮಿತ್ತಬೈಲ್, ನಾಗೇಶ್ ಟೈಲ‌ರ್, ಭೋಜ ಸಾಲ್ಯಾನ್, ಶೈಲೇಶ್‌ ಕೈಕುಂಜೆ, ಅಕ್ಷಯ್ ಕಾಮಾಜೆ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ 

By Suddi9

Leave a Reply

Your email address will not be published. Required fields are marked *