ಬಂಟ್ವಾಳ:  ಸಮಾಜ ಸೇವೆಯಿಂದ ಆತ್ಮಸಂತೃಪ್ತಿಯನ್ನು ಕಾಣಬೇಕು . ದುರ್ಬಲರಿಗೆ ಸಹಾಯ ಮಾಡುವುದರಿಂದ  ಜೀವನವು ಸಾರ್ಥಕವಾಗುತ್ತದೆ ಎಂದು ಬರಿಮಾರು ಚರ್ಚಿನ ಧರ್ಮಗುರುಗಳಾದ ಪೆಟ್ರಿಕ್ ಸಿಕ್ವೇರಾ ಹೇಳಿದರು. 
ಅವರು ಲಯನ್ಸ್ ಕ್ಲಬ್ ಮಾಣಿ ಇದರ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನೂತನ ಅಧ್ಯಕ್ಷ ವಿನ್ಸೆಂಟ್ ಲಸ್ರಾದೋ, ಕಾರ್ಯದರ್ಶಿ ಅನಿಲ್ ಕುಮಾರ್ ಪೆರಾಜೆ , ಕೋಶಾಧಿಕಾರಿ ರೊನಾಲ್ಡ್ ಮೊನಿಸ್ ಮತ್ತು ಅವರ ತಂಡಕ್ಕೆ ಶುಭಹಾರೈಸಿದರು. 
 
೨೦೨೬-೨೭ರ ಪದಾಧಿಕಾರಿಗಳ ಪದಗ್ರಹಣವನ್ನು  ಲಯನ್ಸ್  ಜಿಲ್ಲಾ ಗವರ್ನರ್ ಲ| ವೆಂಕಟೇಶ್ ಹೆಬ್ಬಾರ್ ಅವರು  ನೆರವೇರಿಸಿದರು. ಮಾಜಿ ಗವರ್ನರ್ ವಸಂತಕುಮಾರ್ ಶೆಟ್ಟಿ ಶುಭ ಹಾರೈಸಿದರು. 
ವೇದಿಕೆಯಲ್ಲಿ ಪ್ರತಿಭಾ ಹೆಬ್ಬಾರ್ , ವಲಯಾಧ್ಯಕ್ಷರಾದ ಶ್ರೀನಿವಾಸ ಮೆಲ್ಕಾರ್ , ಅಜಿತ್ ಕುಮಾರ್ ಮಂಚಿ , ಸ್ಥಾಪಕಾಧ್ಯಕ್ಷ ಗಂಗಾಧರ ರೈ, ನಿಕಟಪೂರ್ವ ಅಧ್ಯಕ್ಷ ಜನಾರ್ದನ ಪೆರಾಜೆ ಹಾಗೂ ಪದಾಧಿಕಾರಿಗಳಾದ ರತ್ನಾಕರ ರೈ, ರಾಜೇಶ್ ಶೆಟ್ಟಿ, ಡಾ. ಶ್ರೀನಾಥ್ ಆಳ್ವ , ಕೂಸಪ್ಪ ಪೂಜಾರಿ , ಜಗದೀಶ್ ಭಟ್  , ಮಾರ್ಸೆಲ್ ಪಾಯಸ್ ಉಪಸ್ಥಿತರಿದ್ದರು. ಜಯಾನಂದ ಪೆರಾಜೆ ಅತಿಥಿಗಳನ್ನು ಪರಿಚಯಿಸಿದರು. ಗಂಗಾಧರ ಆಳ್ವ, ಉಮೇಶ್ ಬರಿಮಾರು ನಿರೂಪಿಸಿದರು. 
 
ಇದೇ ವೇಳೆ ಎಸ್.ಎಸ್.ಎಲ್.ಸಿ. ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕರ್ನಾಟಕ ಪ್ರೌಢ ಶಾಲೆ ಮಾಣಿ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ, ಸರಕಾರಿ ಪ್ರೌಢ ಶಾಲೆ ಕಡೇಶ್ವಾಲ್ಯ , ಶ್ರೀರಾಮ ಚಂದ್ರ ಪದವಿಪೂರ್ವ ಕಾಲೇಜು ಪೆರ್ನೆಯ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. 

By Suddi9

Leave a Reply

Your email address will not be published. Required fields are marked *