ಸಂಘದಲ್ಲಿ `ಆಟಿಡೊಂಜಿ ದಿನ’ ಸಂಭ್ರಮ

ಗುರುಪುರ : ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಸ್ಫೂರ್ತಿ ಬಿಲ್ಲವ ಮಹಿಳಾ ಘಟಕ ಗುರುನಗರ ಗುರುಪುರ ಇಲ್ಲಿ ಜು. ೨೬ರಂದು `ಆಟಿಡೊಂಜಿ ದಿನ’ ತುಳುನಾಡ ಜಾನಪದ ಸಂಭ್ರಮ ಜರುಗಲಿದೆ.

 

ಸಂಘದ ಸಮುದಾಯ ಭವನದಲ್ಲಿ ಬೆಳಿಗ್ಗೆ ೯ರಿಂದ ಅಪರಾಹ್ನ ೨ ಗಂಟೆಯವರೆಗೆ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವ ೨ನೇ ವರ್ಷದ ಈ ಕಾರ್ಯಕ್ರಮದಲ್ಲಿ ತುಳುನಾಡ ಪರಂಪರೆಯಲ್ಲಿ `ಆಟಿ’ ತಿಂಗಳಿಗಿರುವ ಮಹತ್ವದ ಕುರಿತು ಪತ್ರಕರ್ತ ಮೋಹನದಾಸ ಮರಕಡ ಮಾತನಾಡಲಿದ್ದಾರೆ. ಸ್ಥಳೀಯ ಬಿಲ್ಲವ ಮಕ್ಕಳಿಂದ `ಆಟಿ ಕಳಂಜ’ ಸಹಿತ ತುಳು ಜಾನಪದ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಕಳೆದ ವರ್ಷದಂತೆ ಈ ವರ್ಷವೂ ಆಟಿ ತಿಂಗಳಿಗೆ ಸಂಬAಧಿಸಿದ ೨೦ಕ್ಕೂ ಅಧಿಕ ತಿಂಡಿ-ತಿನಸುಗಳ ಅನಾವರಣ ಹಾಗೂ ಪ್ರೀತಿ ಭೋಜನ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಬರಿಪಟ್ಲ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *