ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಂಟ್ವಾಳ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 8 ಅಂಗನವಾಡಿ ಕಾರ್ಯಕರ್ತೆ ಮತ್ತು 12 ಅಂಗನವಾಡಿ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳು ತಾತ್ಕಾಲಿಕ ಹಾಗೂ ಗೌರವಧನ ಆಧಾರಿತವಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳು ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.
ಕಾರ್ಯಕರ್ತೆ ಹುದ್ದೆಗಳಿಗೆ ಖಾಲಿ ಇರುವ ಅಂಗನವಾಡಿ ಕೇಂದ್ರಗಳು: ಕುಕ್ಕಿಪಾಡಿ–ಮಾಡಮೆ, ಪುರಸಭೆ ಬಿ.ಮೂಡ ವಾರ್ಡ್ ನಂ.11ರ ಗೂಡಿನ ಬಳಿ, ಅಮ್ಮುಂಜೆ–ಧಾರೆಕಟ್ಟೆ, ಪಾಂಡೀಲು, ಕರಿಯಂಗಳ–ಗುಂಡಿಕುಮೇರು, ಸಜೀಪನಡು–ಸಜೀಪನಡುಪೇಟೆ ಹಾಗೂ ಸರಪಾಡಿ–ಕುಂಟಾಲಪಲ್ಕೆ, ಪುರಸಭೆ ಬಿ.ಮೂಡ ವಾರ್ಡ್ ನಂ.10ರ ಕಾಮಾಜೆ.
ಸಹಾಯಕಿ ಹುದ್ದೆಗಳಿಗೆ ಖಾಲಿ ಇರುವ ಅಂಗನವಾಡಿ ಕೇಂದ್ರಗಳು: ಬಡಗಕಜೆಕಾರು–ಹಾರ್ದೊಟ್ಟು, ಪುರಸಭೆ ಬಿ.ಕಸಬ ವಾರ್ಡ್ ನಂ.1ರ ಲೋರಮ್ರಪದವು, ಬಾಳಿಲ–ಸಣ್ಣಕುಕ್ಕು, ಕಳ್ಳಿಗೆ–ಪಾದೆ, ತೊಡಂಬಿಲ, ಪುರಸಭೆ ಬಿ.ಮೂಡ ವಾರ್ಡ್ ನಂ.15ರ ಶಾಂತಿಯಂಗಡಿ, ನರಿಂಗಾನ–ಚೆನ್ನಕಟ್ಟೆ, ಮೇರಮಜಲು–ಬಡ್ಡೂರು, ಪುರಸಭೆ ಬಿ.ಕಸಬ ವಾರ್ಡ್ ನಂ.5ರ ಹೊಸ್ಮಾರು, ಮಣಿನಾಲ್ಕೂರು–ನಡುಮೊಗರು, ಪುರಸಭೆ ಬಿ.ಮೂಡ ವಾರ್ಡ್ ನಂ.13ರ ಕೈಕುಂಜೆ ಹಾಗೂ ಕುಕ್ಕಿಪಾಡಿ–ಸಿದ್ದಕಟ್ಟೆ ಚರ್ಚ್ ಅಂಗನವಾಡಿ ಕೇಂದ್ರಗಳು.
ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಕೈಕುಂಜೆ ಜೋಡು ಮಾರ್ಗ ಅಂಚೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹತ್ತಿರ, ಬಂಟ್ವಾಳ ಇಲ್ಲಿಗೆ ಸಲ್ಲಿಸಬೇಕು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 08255-298562 ಅನ್ನು ಸಂಪರ್ಕಿಸಬಹುದಾಗಿದೆ. 

By Suddi9

Leave a Reply

Your email address will not be published. Required fields are marked *