ಬಂಟ್ವಾಳ: ಕಲ್ಲಡ್ಕ ‌ ಶ್ರೀ ರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಬ್ರೈಟ್ ವಿಷನ್ ಇಂಗ್ಲೀಷ್ ಅಸೋಸಿಯೇಷನ್ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ನಿವೃತ್ತ ಇಂಗ್ಲೀಷ್ ಉಪನ್ಯಾಸಕರಾದ ಜಯಶ್ರೀ ಭಟ್ ಅವರು ಇಂಗ್ಲೀಷ್ ಭಾಷೆಯ ಮಹತ್ವ, ಪರಿಣಾಮಕಾರಿ ಸಂವಹನ ಕೌಶಲ್ಯ, ಓದುವ ಅಭ್ಯಾಸ ಹಾಗೂ ವ್ಯಕ್ತಿತ್ವ ವಿಕಾಸದ ಕುರಿತು  ಉಪನ್ಯಾಸ ನೀಡಿದರಲ್ಲದೆ
ಇಂಗ್ಲಿಷ್ ಅಸೋಸಿಯೇಷನ್‌ನ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.
 
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ  ವಸಂತ ಬಲ್ಲಾಳ್ ಅವರು ವಹಿಸಿ ಅಸೋಸಿಯೇಷನ್ ಮೂಲಕ ದೊರೆಯುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದರು.  ಕ ಇಂಗ್ಲೀಷ್ ಅಸೋಸಿಯೇಷನ್ ನ ನಿರ್ದೇಶಕಿಯಾದ ರೋಹಿಣಿ ಉಪಸ್ಥಿತರಿದ್ದರು. 
 ವಿದ್ಯಾರ್ಥಿಗಳಾದ ರಕ್ಷಿತ್ ನಿರೂಪಿಸಿದರು. ಗಾನವಿ ಸ್ವಾಗತಿಸಿ, ಅಶ್ವಿನಿ ವಂದಿಸಿದರು.
 

By Suddi9

Leave a Reply

Your email address will not be published. Required fields are marked *