ಬಂಟ್ವಾಳ:  ರಾಷ್ಟ್ರೀಯ ಸ್ವಯಂಸೇವಕ ಸಂಘದ ಘುಮಂತು ಕಾರ್ಯ ಮಂಗಳೂರು ವಿಭಾಗದ  ಆಶ್ರಯದಲ್ಲಿ ವಾಮದಪದವು ಶ್ರೇಯಾ ಎಂಟರ್ಪ್ರೈಸಸ್ ಮತ್ತು ಪ್ರಾಪರ್ಟೀಸ್ ವತಿಯಿಂದ ಹಳ್ಳಿಯಲ್ಲಿ ಉದ್ಯೋಗ ಸೃಷ್ಟಿಸೋಣ ಬನ್ನಿ, ಬ್ಯಾಕ್ ಟು ಊರು   ಕಾರ್ಯಕ್ರಮವು ವಾಮದಪವು ಸಮೀಪದ ಪಾಂಗಲ್ಪಾಡಿ ಶ್ರೀ ದುರ್ಗಾ ಯಾತ್ರಿ ನಿವಾಸ ಸಭಾಂಗಣದಲ್ಲಿ   ಜರಗಿತು.


ಬಂಟ್ವಾಳ  ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಟ್ಟಣದ ಉದ್ಯೋಗಕ್ಕಿಂತಲೂ ಹಳ್ಳಿಯಲ್ಲಿ ಕಡಿಮೆ ಬಂಡವಾಳದೊಂದಿಗೆ ಹೆಚ್ಚು ಆದಾಯ ಗಳಿಸುವ ಸ್ವೋದ್ಯೋಗ ಅವಕಾಶಗಳಿವೆ.ಯುವಕರು ಇಂತಹ ಅವಕಾಶಗಳನ್ನು ಬಳಸಿಕೊಂಡಾಗ ಯಶಸ್ವಿಯಾಗಲು ಸಾಧ್ಯ.ಗ್ರಾಮಗಳ ಅಭಿವೃದ್ದಿಯಿಂದ ದೇಶದ ಅಭಿವೃದ್ಧಿಯಾಗುವುದು. ಇಂತಹ ಕಾರ್ಯಕ್ರಮಗಳ ಆಯೋಜನೆ ಅಭಿನಂದನೀಯ  ಎಂದು ಹೇಳಿದರು.


ಮಂಗಳೂರು ಉದ್ಯಮಿ ಸಂದೇಶ್ ಶೆಟ್ಟಿ,  ಬಾಲಭವನ ಮಾಜಿ ಅಧ್ಯಕ್ಷೆ  ಸುಲೋಚನಾ ಜಿ.ಕೆ. ಭಟ್, ಸಿದ್ದಕಟ್ಟೆ ಹಾ.ಉ.ಸ.ಸಂಘದ ಅಧ್ಯಕ್ಷ ರತ್ನ ಕುಮಾರ್ ಚೌಟ, ಪ್ರಮುಖರಾದ  ಶಂಕರ್ ಶೆಟ್ಟಿ ಬೆದ್ರಮಾರ್, ಮೋಹನ್ ಶೆಟ್ಟಿ ನರ್ವಲ್ದಡ್ಡ, ಪುರುಷೋತ್ತಮ ಶೆಟ್ಟಿ ವಾಮದಪದವು,  ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಶಾರೀರಿಕ ಪ್ರಮುಖ್ ವಿನೋದ್ ಕುಮಾರ್ ಕೊಡ್ಮಾಣ್, ಘುಮಂತು ಕಾರ್ಯ ಮಂಗಳೂರು ವಿಭಾಗ ಸಂಯೋಜಕ ಸುದರ್ಶನ್ ಕನ್ಯಾಡಿ, ಗೋಸೇವಾ ವಿಭಾಗ ಮಾರಾಟ ಪ್ರತಿನಿಽ ಅಶೋಕ್ ಇಳಂತಿಲ,ರಕ್ಷಿತ್ ಬುಡೋಳಿ,ರೂಪೇಶ್ ಕಾರ್ಕಳ, ಸಚಿನ್ ಕಲ್ಮಂಜ ಮತ್ತಿತರರು ಉಪಸ್ಥಿತರಿದ್ದರು.


ಬ್ಯಾಕ್ ಟು ಊರು, ಬೇರೆ ರಾಜ್ಯ ಅಥವಾ ದೇಶದಲ್ಲಿರುವವರಿಗೆ ತಮ್ಮ ಊರಿನಲ್ಲೇ ಉದ್ಯೋಗ ಸೃಷ್ಟಿಸಲು ಸಹಾಯ ಮಾಡುವ ಯೋಜನೆಯ ಬಗ್ಗೆ ಮಾಹಿತಿ ನೀಡಲಾಯಿತು.   ವಿಕಸಿತ ಭಾರತದ ಗುರಿ ಮತ್ತು ಗ್ರಾಮೀಣ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು.


 ಸ್ವ ಉದ್ಯೋಗ ಲೋನ್ ಮಾಹಿತಿ: ಪ್ರಧಾನಮಂತ್ರಿ ಮುದ್ರಾ ಯೋಜನೆ ಮತ್ತಿತರ ಸಾಲಾ ಸೌಲಭ್ಯಗಳ ಬಗ್ಗೆ   ಎಂಎಸ್‌ಎಂಇ ಸಹಾಯಕ ನಿರ್ದೇಶಕ ಸುಂದರ್ ಎಸ್. ಮಾಳ ಅವರು   ಮಾಹಿತಿ ನೀಡಿದರು. ಡೈರಿ ಫಾರ್ಮಿಂಗ್ ಬಗ್ಗೆ ಪ್ರಜ್ಞಾ  ನಾರಾವಿ ಹಾಗೂ ಘುಮಂತು ಕಾರ್ಯ ವಿಭಾಗದ ಬಗ್ಗೆ ಲಕ್ಷ್ಮಣ್ ದಾಸ್ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ  ಗ್ರಾಮೀಣ   ಉದ್ಯಮ ಸಾಧಕರಾದ  ಕಾರ್ತಿಕ್ (ಹಾಳೆತಟ್ಟೆ ತಯಾರಿಕೆ) ಸುಲೋಚನಾ(ಹೈನುಗಾರಿಕೆ), ರೇಖಾ(ಕೃಷಿ ಉತ್ಪನ್ನ ತಯಾರಿಕೆ) ಇವರನ್ನು ಸಮ್ಮ್ಮಾನಿಸಸಲಾಯಿತು.
ಸಂಘಟಕ ಶರತ್ ಕುಮಾರ್ ಶೆಟ್ಟಿ ಅವರು ಸ್ವಾಗತಿಸಿ,ಲಕ್ಷ್ಮಣದಾಸ ವಂದಿಸಿದರು.

By Suddi9

Leave a Reply

Your email address will not be published. Required fields are marked *