ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು
ವಿಟ್ಲ ಶಾಖೆಯ ಪತಂಜಲಿ ಯೋಗ ಶಿಕ್ಷಣದ ಸಹಪ್ರಮುಖರಾದ ಗೀತಾ ಮಾತನಾಡಿ, ದೇಹಕ್ಕೆ ರೋಗನಿರೋಧಕ ಶಕ್ತಿ, ಬಲ ಹಾಗೂ ಮನಸ್ಸಿಗೆ ಏಕಾಗ್ರತೆ, ಧೈರ್ಯವನ್ನು ಒದಗಿಸುವಲ್ಲಿ ಯೋಗವು ತುಂಬಾ ಸಹಕಾರಿಯಾಗಿದೆ ಎಂದರು.

ಯೋಗದ ವಿಧಗಳು ಹಾಗೂ ಯೋಗದಿಂದ ದೇಹಕ್ಕೆ ಆಗುವ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಕಾರ್ಯಕ್ರಮದ ಮೊದಲು ಅತಿಥಿಗಳು ದೀಪ ಪ್ರಜ್ವಲಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು.
ನಂತರ ೭ನೇ ತರಗತಿ ವಿದ್ಯಾರ್ಥಿ ಯಶವಂತ ರಮೇಶ್ ಉಪ್ಪಾರ್ ರಿದಮಿಕ್ ಯೋಗ ಮಾಡಿದನು.
೭ನೇ ತರಗತಿಯ ವಿದ್ಯಾರ್ಥಿಗಳಿಗೆ ಯೋಗ ಪ್ರಮುಖರು ಯೋಗವನ್ನು ಹೇಳಿಕೊಟ್ಟರು. ಪ್ರಾಥಮಿಕ ಶಾಲೆಯ ಯೋಗ ಶಿಕ್ಷಕಿ ದೇವಕಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಸ್ನೇಹ ತರಗತಿವಾರು ಯೋಗವನ್ನು ಮಾಡಿಸಿದರು.
ವೇದಿಕೆಯಲ್ಲಿ ಕೆಲಿಂಜ ಶ್ರೀನಿಕೇತನ ಶಾಖೆ ಸಂಚಾಲಕರು ರಾಮಣ್ಣ, ವಿಟ್ಲ ಶಾಖೆಯ ಪತಂಜಲಿ ಯೋಗ ಸಂಘಟನಾ ಪ್ರಮುಖರಾದ ಪ್ರಕಾಶ್ , ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಆರಾಧ್ಯ.ಕೆ ಸ್ವಾಗತಿಸಿ, ಪುಣ್ಯಶ್ರೀ ನಿರೂಪಿಸಿ, ವೈಷ್ಣವಿ ವಂದಿಸಿದರು.
