ಬಂಟ್ತಾಳ: ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ” ಇದರ ವತಿಯಿಂದ 2026ರ ನವೀಕರಿಸಲಾದ ತಂಡಗಳಿಗೆ ಪರವಾನಿಗೆ ಪತ್ರ ಹಾಗೂ ಸಾಂತ್ವನ ನಿಧಿ ವಿತರಿಸಲಾಯಿತು.

ಸೋಮವಾರ ಬಿ.ಸಿ.ರೋಡಿನಲ್ಲಿ  ಒಕ್ಕೂಟದ ಅಧ್ಯಕ್ಷರಾದ ಸರಪಾಡಿ ಅಶೋಕ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ತಂಡದ 45 ಮಂದಿ ಸಂಚಾಲಕರುಗಳು 2026ರ ನವೀಕರಿಸಲಾದ ತಂಡಗಳಿಗೆ ಪರವಾನಿಗೆ ಪತ್ರ ವಿತರಿಸಲಾಯಿತು.
ಅದೇರೀತಿ  ಕಳೆದ ವರ್ಷ ಚಿಕ್ಕ ಮೇಳದ ತಿರುಗಾಟದಲ್ಲಿ ವಾಹನ ಅಪಘಾತದಲ್ಲಿ ನಿಧನರಾದ ಸತೀಶ ಆಚಾರ್ಯ ವೇಣೂರು ಅವರ ತಾಯಿ ವಿನೋದ ಅವರಿಗೆ  ಸಾಂತ್ವನ ನಿಧಿ ಹಾಗೂ ಇತ್ತೀಚೆಗೆ  ಅಪಘಾತಕ್ಕೊಳಪಟ್ಟ ಶ್ರೀನಿಧಿ ಭಟ್ ಕಟೀಲು ಅವರಿಗೂ ಸಾಂತ್ವನ ನಿಧಿ ವಿತರಿಸಲಾಯಿತು.
.ಸಭೆ ಯಲ್ಲಿ ಉಪಾಧ್ಯಕ್ಷರಾದ ರಮೇಶ್ ಕುಲಶೇಖರ, ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೆಮಾರ್, ಕೋಶಾಧಿಕಾರಿ ದಿವಾಕರದಾಸ್ ಕಾವಳಕಟ್ಟೆ ಮೊದಲಾದವರಿದ್ದರು. 

By Suddi9

Leave a Reply

Your email address will not be published. Required fields are marked *