ಬಂಟ್ವಾಳ: ಕಟಪಾಡಿ –ಉಳ್ಳಾಲ ಅಬ್ಬಕ್ಕ ಸರ್ಕಲ್  ರಾಜ್ಯ ಹೆದ್ದಾರಿ- 300 ನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ  ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಭಾಗದ ಪ್ರಮುಖರ ನಿಯೋಗ ದ.ಕ.ಲೋಕಸಭಾ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಲಿಖಿತ ಮನವಿ ಸಲ್ಲಿಸಿ ಆಗ್ರಹಿಸಿದೆ.


ಕಟಪಾಡಿಯಿಂದ ಆರಂಭವಾಗಿ ಕಾರ್ಕಳ, ಮೂಡಬಿದಿರೆ ,ಸಿದ್ದಕಟ್ಟೆ,ಬಂಟ್ವಾಳ ಮಾರ್ಗವಾಗಿ ಮೆಲ್ಕಾರ್ , ಮುಡಿಪು ಮೂಲಕ ಉಳ್ಳಾಲ ಅಬ್ಬಕ್ಕ ಸರ್ಕಲ್  ವರೆಗಿನ ರಾಜ್ಯ ಹೆದ್ದಾರಿ-300 ರಲ್ಲಿ ದಿನನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತಿದ್ದು ರಸ್ತೆಯು ಅಲ್ಲಲ್ಲಿ ತಿರುವುಗಳಿಂದ ಕೂಡಿದೆಯಲ್ಲದೆ ವಾಹನಗಳ ಸಂಚಾರಕ್ಕೆ ಬೇಕಾದಷ್ಟು ಅಗಲೀಕರಣ ಇರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ರಾಜ್ಯ ಹೆದ್ದಾರಿಯಲ್ಲಿ ಮುಖ್ಯವಾಗಿ ಬಂಟ್ವಾಳ-ಮೂಡಬಿದ್ರಿ ರಸ್ತೆಯು ತುಂಬಾ ಕಿರಿದಾಗಿದಲ್ಲದೆ ನೇಕ ಕಡೆಗಳಲ್ಲಿ ತಿರುವುಗಳನ್ನು ಹೊಂದಿರುವುದರಿಂದ ವಾಹನಗಳ ಸುಗಮ ಸಂಚರಕ್ಕೆ ಆಡಚಣೆಯಾಗಿದೆ.ಈ ಹಿನ್ನಲೆಯಲ್ಲಿ ಕಟಪಾಡಿ –ಉಳ್ಳಾಲ ಅಬ್ಬಕ್ಕ ಸರ್ಕಲ್ ರಾಜ್ಯ ಹೆದ್ದಾರಿ- 300 ನ್ನು  ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಕೇಂದ್ರ ಸಚಿವರ ಗಮನಕ್ಕೆ ತಂದು ಕ್ರಮಕೈಗೊಳ್ಳುವಂತೆ    ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ‌ ಸಿದ್ದಕಟ್ಟೆ ಪಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ
     ಈ ಸಂದರ್ಭದಲ್ಲಿ
ಕೊರ್ಯಾರ್ ದೇವಸ್ಥಾನದ ಗುರಿಕಾರ ಗೋಪಾಲ ಗೌಡ,ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಂಗಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ದಾಮೋದರ ಪೂಜಾರಿ, ಸಿದ್ದಕಟ್ಟೆ ಸಿ. ಎ. ಬ್ಯಾಂಕ್ ನಿರ್ದೇಶಕರಾದ ನವೀನ ಹೆಗ್ಡೆ, ಮಾಜಿ ನಿರ್ದೇಶಕ ದೇವುರಾಜ್ ಸಾಲಿಯಾನ್,
ಪ್ರಮುಖರಾದ ಹೇಮಚಂದ್ರ ಗೌಡ, ರಾಮಕೃಷ್ಣ ನಾಯಕ್ ಕಿನ್ನಾಜೆ, ಚಂದ್ರಶೇಖರ ಪುವಳ ಕರ್ಪೆ,ಗಂಗಾಧರ್ ಗೌಡ, ಉಮೇಶ್ ಗೌಡ ಮಂಚಕಲ್ , ಕರುಣಾ ಮಂಚಕಲ್,ಸದಾನಂದ ಕುಲಾಲ್, ಡಾಕಯ ಗೌಡ ಮೊದಲಾದವರು ಉಪಸ್ಥಿತರಿದ್ದರು.


ಭಾನುವಾರ ಕೊರ್ಯಾರು ಶ್ರೀ ದುರ್ಗಾಪರಮೇಶ್ವರೀ  ದೇವಸ್ಥಾನದ  ದೃಢಕಲಶ ಕಾರ್ಯಕ್ರಮದಲ್ಲಿ ಭಾಗವಹಿದ ಸಂದರ್ಭದಲ್ಲಿ  ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಲಾಯಿತು. 

By Suddi9

Leave a Reply

Your email address will not be published. Required fields are marked *