ಬಂಟ್ವಾಳ: ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ
ಪೊಳಲಿ ಸರಕಾರಿ ಪ್ರೌಢಶಾಲೆಯಲ್ಲಿ ಯಕ್ಷ ಶಿಕ್ಷಣದ ನಾಟ್ಯ ತರಬೇತಿ ಕಾರ್ಯಕ್ರಮದ ಪ್ರಾರಂಭೋತ್ಸವ ಶುಕ್ರವಾರ ಚಾಲನೆ ನೀಡಲಾಯಿತು.

ಟ್ರಸ್ಟಿನ ಸಂಚಾಲಕರಾದ ವಾಸುದೇವ ಐತಾಳ್ ಅವರು ಉದ್ಘಾಟಿಸಿ ಅವರು ಮಾತನಾಡಿ,ಯಕ್ಷಗಾನವನ್ನು ಅಭ್ಯಾಸ ಮಾಡುವುದರಿಂದ ಏಕಾಗ್ರತೆ, ವೇದಿಕೆಯಲ್ಲಿ ನೀರರ್ಗಳತೆಯಿಂದ ಮಾತನಾಡುವುದು, ನಮ್ಮ ಪರಂಪರೆ,ಸಂಸ್ಕೃತಿಯ ಅರಿವಾಗುತ್ತದೆ ಎಂದು ತಿಳಿಸಿದರು

ಅತಿಥಿಗಳಾಗಿ ಭಾಗವಹಿಸಿದ್ದ ಪೊಳಲಿ- ಕೈಕಂಬ ಘಟಕದ ಸದಸ್ಯರಾದ ಲೋಕೇಶ್ ಭರಣಿ ಶುಭ ಹಾರೈಸಿದರು.ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ವೆಂಕಟೇಶ ನಾವಡ ಅಧ್ಯಕ್ಷತೆ ವಹಿಸಿದ್ದರು.
ಯಕ್ಷ ಗುರುಗಳಾದ ದಿನೇಶ್ ಬಂಗೇರ ವಿದ್ಯಾರ್ಥಿಗಳಿಗೆ ಪ್ರಾರಂಭಿಕ ನಾಟ್ಯ ಹೆಜ್ಜೆಯನ್ನು ಅಭ್ಯಾಸ ಮಾಡಿಸಿದರು. ಮುಖ್ಯ ಶಿಕ್ಷಕರಾದ ಸುಬ್ರಾಯ ಪೈ ಸ್ವಾಗತಿಸಿದರು. ರಂಜಿತ ಕಾರ್ಯಕ್ರಮ ನಿರೂಪಿಸಿದರು.
