ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ೨೦೨೬-೨೭ ನೇ ಸಾಲಿನ ಶೈಕ್ಷಣಿಕ  ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಆಗತ- ಸ್ವಾಗತ  ಕಾರ್ಯಕ್ರಮ ಗುರುವಾರ  ಆಜಾದ್ ಸಭಾಂಗಣದಲ್ಲಿ ನಡೆಯಿತು.

ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರು,ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ  ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿ ,ನಮ್ಮ ಮೂಲ ಚಿಂತನೆಯನ್ನು ಮೈಗೂಡಿಸಿಕೊಂಡು ದೇಶಕ್ಕಾಗಿ ಬದುಕುವುದನ್ನು ಕಲಿಯುವುದರ ಜೊತೆಗೆ ನಮ್ಮ ಪರಂಪರೆ, ರೂಢಿ, ಸಂಪ್ರದಾಯ, ಋಷಿ ಮುನಿಗಳ ಉದಾತ್ತ ಧ್ಯೇಯಗಳು ನಮ್ಮ ಬದುಕಿಗೆ ಪಾಠವಾಗಬೇಕು. ಜೊತೆಗೆ ಸ್ವದೇಶಿ ಚಿಂತನೆಯನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕೆಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಯ  ಉಡುಪಿ ಎಸ್ ಕೆ ಪಿ ಗ್ರೂಪ್ ನ ಮ್ಯಾನೇಜಿಂಗ್ ಡೈರೆಕ್ಟರ್  ಸಂಪತ್ ಶೆಟ್ಟಿ ಮಾತನಾಡಿ ಜೀವನದಲ್ಲಿ ನಾವು ಎತ್ತರವಾದ ಕನಸುಗಳನ್ನು ಕಟ್ಟಿಕೊಳ್ಳಬೇಕು,ಕನಸುಗಳನ್ನು ಸಾಕಾರಗೊಳಿಸಲು  ಸತತ ಶ್ರಮಪಟ್ಟು ಗುರಿ ಸಾಧಿಸಬೇಕು ಆಗ ನಮ್ಮ ಜೀವನ ಸಾರ್ಥಕ ವಾಗುತ್ತದೆ ಎಂದರು .


ಇನ್ನೋರ್ವ ಅತಿಥಿ  ಬಿಜೆಪಿ ರಾಜ್ಯ ವಕ್ತಾರರಾದ  ಸುರಭಿ  ಹೊದಿಗೆರೆ ಮಾತನಾಡಿ, ಆಧ್ಯಾತ್ಮಿಕ ವಿಷಯ ಗಳೊಂದಿಗೆ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ದೇಶದ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದರು.


ಉಡುಪಿ ಎಸ್ ಕೆ ಪಿ ಗ್ರೂಪ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್  ವಿನಯ ಶೆಟ್ಟಿ, ಜನರಲ್ ಮ್ಯಾನೇಜರ್  ಶ್ರೀನಿವಾಸ್ ಶೆಟ್ಟಿ,
ಪುತ್ತೂರು ರವೀಂದ್ರ ಇಂಜಿನಿಯರ್ ದಕ್ಷ ಕನ್ಸಲ್ಟೆನ್ಸಿಯ ರವೀಂದ್ರ ಮತ್ತು  ಉಷಾ  ಪುತ್ತೂರು ,ಪತ್ರಕರ್ತ ಶ್ಯಾಮ ಸುದರ್ಶನ್, ಶ್ರೀ ರಾಮ ವಿದ್ಯಾಕೇಂದ್ರದ ಸಂಚಾಲಕರಾದ   ವಸಂತ ಮಾಧವ  ವೇದಿಕೆಯಲ್ಲಿ ಉಪಸ್ಥಿತರಿದ್ದರು.
  ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಹೋಮ ಕುಂಡಕ್ಕೆ ಅರ್ಘ್ಯವನ್ನು ಅರ್ಪಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಹಿರಿಯರಿಂದ ತಿಲಕ ಧಾರಣೆ  ಮಾಡಿಸಿ, ಆಶೀರ್ವಾದ ಪಡೆದುಕೊಂಡರು. ಪ್ರಾಂಶುಪಾಲರಾದ  ವಸಂತ ಬಲ್ಲಾಳ್  ಸ್ವಾಗತಿಸಿದರು. ಕು.ಮನಾಲಿ  ವಂದಿಸಿದರು. ಕು. ಕೃತಿಕಾ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *