ಬಂಟ್ವಾಳ: ವಿದ್ಯಾರ್ಥಿಗಳು ಪದವಿಯನ್ನು ಮುಗಿಸಿ ಹೊರಬರುವಾಗ ಸಮಾಜವು ಒಡ್ಡುವ ಸವಾಲುಗಳನ್ನು ಸ್ವೀಕರಿಸಲು ಸಿದ್ಧರಾಗುವುದು ಅನಿವಾರ್ಯ ಎಂದು ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಿರೀಶ ಭಟ್ ಅಜಕ್ಕಳ ಹೇಳಿದರು.
 ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ  ಮಾತನಾಡಿದ ಅವರು “ಪದವಿಯೊಂದಿಗೆ ಶಿಕ್ಷಣ ಸಂಸ್ಥೆಯಿಂದ  ಹೊರಬರುವುದೆಂದರೆ ಒಂದು ಪ್ರಮುಖ ಹಂತವನ್ನು ಪೂರೈಸಿ ಸಾರ್ವಜನಿಕ ಬದುಕಿಗೆ ತೆರೆದುಕೊಂಡಂತೆ ಎಂದರು.
 
ಉನ್ನತ ಶಿಕ್ಷಣ ಮತ್ತು ಉದ್ಯೋಗ ಇವೆರಡರ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವ ಒತ್ತಡವೂ ಈ ಹಂತದಲ್ಲಿ ಇರುತ್ತದೆ. ಹೀಗಾಗಿ ಪದವೀಧರರು ತಮ್ಮ ಆಸಕ್ತಿಯೇನು ಎಂಬುದನ್ನು ಅರಿತುಕೊಂಡು ಮುಂದಿನ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಕಠಿಣ ಪರಿಶ್ರಮದಿಂದ ತೊಡಗಿಸಿಕೊಂಡಾಗ  ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಅವರು ತಿಳಿಸಿದರು.  
  ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರಿಪ್ರಸಾದ್ ಶೆಟ್ಟಿ ಮಾತನಾಡಿ, “ಕಾಲೇಜುಗಳು ಗುರುತಿಸಲ್ಪಡುವುದು ಅಲ್ಲಿ ಕಲಿಯುವ ವಿದ್ಯಾರ್ಥಿಗಳ ಮೂಲಕ, ವಿದ್ಯಾರ್ಥಿಗಳು ಕಾಲೇಜುಗಳ ರಾಯಭಾರಿಗಳಾಗಿದ್ದು, ಒಳ್ಳೆಯ ವಿದ್ಯಾರ್ಥಿಗಳು ತಮಗೂ, ಹೆತ್ತವರಿಗೂ ಸಂಸ್ಥೆಗೂ ಕೀರ್ತಿಯನ್ನು ತರುತ್ತಾರೆ; ಅಂತಹ ಒಂದು ತಂಡವನ್ನು ಈ ವರ್ಷ ಕಳುಹಿಸಿಕೊಡುತ್ತಿದ್ದೇವೆ” ಎಂದು ತಿಳಿಸಿದರು
. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕರಾದ ಡಾ. ಸುಮನ್ ಶೆಟ್ಟಿ ಮತ್ತು ಇತರ ಬೊಧಕರು ಅನಿಸಿಕೆ ವ್ಯಕ್ತಪಡಿಸಿದರು. ಪ್ರಥಮ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸಂಘಂಟಿಸಿದ್ದರು. 
 

By Suddi9

Leave a Reply

Your email address will not be published. Required fields are marked *