ಬಂಟ್ವಾಳ : ಯುವವಾಹಿನಿ(ರಿ) ಬಂಟ್ವಾಳ ಘಟಕದ 2026-27ನೇ ಸಾಲಿನ ಅಧ್ಯಕ್ಷರಾಗಿ ಕಿರಣ್‌ರಾಜ್ ಪೂಂಜರೆಕೋಡಿ ಆಯ್ಕೆಯಾಗಿದ್ದಾರೆ.

ಬಿ.ಸಿ.ರೋಡ್‌ನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಘಟಕದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಅವರು ನೂತನ ಕಾರ್ಯಕಾರಿ ಸಮಿತಿಯ ಸದಸ್ಯರ ಪಟ್ಟಿಯನ್ನು ಪ್ರಕಟಿಸಿದರು.

2026-27ನೇ ಸಾಲಿನ ಕಾರ್ಯಕಾರಿ ಸಮಿತಿಗೆ ಪ್ರಥಮ ಉಪಾಧ್ಯಕ್ಷರಾಗಿ ನಿಕೇಶ್ ಕೋಟ್ಯಾನ್, ದ್ವಿತೀಯ ಉಪಾಧ್ಯಕ್ಷರಾಗಿ ಹರೀಶ್ ಸಾಲ್ಯಾನ್ ಅಜೆಕಲ, ಕಾರ್ಯದರ್ಶಿಯಾಗಿ ಗೀತಾ ಜಗದೀಶ್, ಜತೆ ಕಾರ್ಯದರ್ಶಿಯಾಗಿ ಧನುಷ್ ಮಧ್ವ ಹಾಗೂ ಕೋಶಾಧಿಕಾರಿಯಾಗಿ ಪ್ರಜಿತ್ ಅಮೀನ್ ಏರಮಲೆ  ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *