ಗುರುಪುರ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಇಂಟಾಕ್ ಮಂಗಳೂರು ವಿಭಾಗ ಮತ್ತು ರಾಣಿ ಅಬ್ಬಕ್ಕ ಚಾವಡಿ ಮಣೆಲ್(ಮಳಲಿ) ಜಂಟಿ ಆಶ್ರಯದಲ್ಲಿ ಮೇ. ೩೦ರಂದು ಮಳಲಿಯ ಶ್ರೀ ಲಕ್ಷಿö್ಮÃವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾದ ಮಣೆಲ್ದ ಪೆರ್ಮೆ ರಾಣಿ ಅಬ್ಬಕ್ಕ `ಮಣೆಲ್ ಗ್ರಾಮೊಡೊಂಜಿ ಚಿತ್ರಕೂಟ’ ಕಾರ್ಯಕ್ರಮವನ್ನು ಪ್ರಸಿದ್ಧ ಚಿತ್ರಕಲಾವಿದ ಗಣೇಶ್ ಸೋಮಯಾಜಿ ಉದ್ಘಾಟಿಸಿದರು.

ಚಿತ್ರ ಕಲಾಕೃತಿ ರಚಿಸಿ ಎರಡು ದಿನಗಳ ಕಾರ್ಯಕ್ರಮ ಉದ್ಘಾಟಿಸಿದ ಸೋಮಯಾಜಿ ಅವರು ಮಾತನಾಡಿ, ಈ ಕಾರ್ಯಕ್ರಮದ ಮೂಲಕ ಸುಮಾರು ೨೦ ಕಲಾಕೃತಿಗಳು(ದೃಶ್ಯಕಲೆ) ಮೂಡಿಬರಲಿದ್ದು, ಇವುಗಳು ಮುಂದೆ ಪುಸ್ತಕ ರೂಪದಲ್ಲಿ ದಾಖಲಾತಿ ಆಗಲಿವೆ. ಕಲಾತ್ಮಕ ಕಾರ್ಯಕ್ರಮಗಳ ಮೂಲಕ ಒಂದು ಊರಿನ ಶ್ರೀಮಂತರ ಪರಂಪರೆ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ರಾಣಿ ಅಬ್ಬಕ್ಕಳು ಮಳಲಿಯಲ್ಲಿದ್ದುಕೊಂಡು ರಾಜ್ಯಭಾರ ಮಾಡಿದ ಚರಿತ್ರೆ, ಸಾಮಾಜಿಕವಾಗಿ ಮಳಲಿ ಪರಿಸರ ಹಾಗೂ ಈ ಊರಿನ ಚಾರಿತ್ರಿಕ ಮತ್ತು ಪಾರಂಪಾರಿಕ ಹಿನ್ನೆಲೆ ಮುಂದಿನ ಪೀಳಿಗೆ ತಿಳಿಯಬೇಕು ಎಂಬೀ ನೆಲೆಯಲ್ಲಿ ಮಳಲಿ, ಅಬ್ಬಕ್ಕ ಮತ್ತು ಇಲ್ಲಿನ ಸಾಮಾಜಿಕ ಹಿನ್ನೆಲೆಯ-ಚರಿತ್ರೆ ಮುಂದಿಟ್ಟುಕೊAಡು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಒಂದು ಊರಿನ ಚರಿತ್ರೆ ಪುಸ್ತಕ ರೂಪದಲ್ಲಿ ಬಂದಿದ್ದರೂ, ಮಣೆಲ್‌ನ ಚರಿತ್ರೆಯನ್ನು ದೃಶ್ಯ ರೂಪದಲ್ಲಿ ಪರಿಚಯಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ರಾಣಿ ಅಬ್ಬಕ್ಕಳು ಮಳಲಿಯಲ್ಲಿದ್ದುಕೊಂಡು ರಾಜ್ಯಭಾರ ಮಾಡಿದ ಚರಿತ್ರೆ, ಸಾಮಾಜಿಕವಾಗಿ ಮಳಲಿ ಪರಿಸರ ಹಾಗೂ ಈ ಊರಿನ ಚಾರಿತ್ರಿಕ ಮತ್ತು ಪಾರಂಪಾರಿಕ ಹಿನ್ನೆಲೆ ಮುಂದಿನ ಪೀಳಿಗೆ ತಿಳಿಯಬೇಕು ಎಂಬೀ ನೆಲೆಯಲ್ಲಿ ಮಳಲಿ, ಅಬ್ಬಕ್ಕ ಮತ್ತು ಇಲ್ಲಿನ ಸಾಮಾಜಿಕ ಹಿನ್ನೆಲೆಯ-ಚರಿತ್ರೆ ಮುಂದಿಟ್ಟುಕೊAಡು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಒಂದು ಊರಿನ ಚರಿತ್ರೆ ಪುಸ್ತಕ ರೂಪದಲ್ಲಿ ಬಂದಿದ್ದರೂ, ಮಣೆಲ್‌ನ ಚರಿತ್ರೆಯನ್ನು ದೃಶ್ಯ ರೂಪದಲ್ಲಿ ಪರಿಚಯಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಮಾತನಾಡಿ, ತುಳುನಾಡಿನ ಸಂಸ್ಕೃತಿ ತಿಳಿಯುವ ಆಸಕ್ತಿಯಿಂದ ಅನಿರೀಕ್ಷಿತವಾಗಿ ಇಲ್ಲಿಗೆ ಭೇಟಿ ನೀಡಿದೆ. ತುಳುನಾಡಿನ ಶ್ರೀಮಂತ ಇತಿಹಾಸ ತಿಳಿಯುವ ಮತ್ತು ತುಳು ಭಾಷೆ ಕಲಿಯುವ ಆಸಕ್ತಿ ಇದೆ. ಕಾರ್ಯಕ್ರಮದ ಮೂಲಕ ಮಣೆಲ್‌ನ ಸಂಸ್ಕೃತಿ ಎಲ್ಲೆಡೆ ಪಸರಿಸುವಂತಾಗಲ ಎಂದರು.

ಕಾರ್ಯಕ್ರಮ ನಿರೂಪಿಸಿದ ನಿವೃತ್ತ ಪ್ರೊಫೆಸರ್ ಅಕ್ಷಯ್ ಕುಮಾರ್ ಅವರು ಚಿತ್ರಕಲಾವಿದರಿಗೆ ಅನುಕೂಲವಾಗುವಂತೆ ಅಬ್ಬಕ್ಕಳ ಮಳಲಿ ಅರಮನೆ, ಮಣೆಲ್‌ನ ಊರುಗಳು, ದೇವಸ್ಥಾನ, ಆಚಾರ-ವಿಚಾರ, ಮಣ್ಣಿನ ಸಂಸ್ಕೃತಿ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಮಳಲಿ ಸ್ವಾಗತಿಸಿ, ಪ್ರಸ್ತಾವಿಸಿದರು. ದೇವಸ್ಥಾನದ ಟ್ರಸ್ಟಿ ವಾಮನ್ ನಾಯ್ಕ್ ಮಳಲಿ, ಮಳಲಿ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಜಾಕ್, ಪ್ರಶಾಂತ್ ಕುಮಾರ್ ಕಟ್ಟೆಮಾರ್, ಇಂಟಾಕ್ ಮಂಗಳೂರು ವಿಭಾಗ ಸಂಚಾಲಕ ಸುಭಾಶ್ಚಂದ್ರ ಬಸು ಮತ್ತಿತರರು ಉಪಸ್ಥಿತರಿದ್ದರು. ಮಣೆಲ್-ಅಬ್ಬಕ್ಕರ ಬಗ್ಗೆ ಅಧ್ಯಯನಶೀಲ ಸಾಮಾಜಿಕ-ಸಾಂಸ್ಕೃತಿಕ, ಚಾರಿತ್ರಿಕ ಮತ್ತು ಸೃಜನಾತ್ಮಕ ಕಲಾಕೃತಿ ರಚಿಸಲಿರುವ ಪ್ರಸಿದ್ಧ ಕಲಾವಿದರಾದ ವಿಲ್ಸನ್ ಸೋಜಾ, ಸಂತೋಷ್ ಅಂದ್ರಾದೆ, ಜೀವನ್ ಸಾಲ್ಯಾನ್, ಹರೀಶ್ ಕೊಡಿಯಾಲಬೈಲು, ರೇಷ್ಮಾ ಎಸ್, ದೀರ್ಘಾ ಎಂ, ನಶ್ಮಿತಾ ಡಿ. ಎನ್, ಶ್ರೀಕಾಂತ್ ಎ, ಅಭಿಷೇಕ್ ತೀರ್ಥಹಳ್ಳಿ, ರೂಪೇಶ್ ಸುವರ್ಣ, ಎನ್. ಸಂದೀಪ್, ಲಿಖಿತ್ ಪೂಜಾರಿ ಪಾಲ್ಗೊಂಡಿದ್ದರು.

ಮಳಲಿ-ಅಬ್ಬಕ್ಕ ಉಪನ್ಯಾಸ :
ಮಳಲಿ ಗ್ರಾಮ ಮತ್ತು ಅಬ್ಬಕ್ಕ ಚರಿತ್ರೆಯ ಕುರಿತು ಇತಿಹಾಸ ತಜ್ಞ ನಿವೃತ್ತ ಉಪನ್ಯಾಸಕ ಡಾ. ಪುಂಡಿಕಾÊ ಗಣಪಯ್ಯ ಭಟ್ ಮಾತನಾಡಿದರು. ತುಳುನಾಡಿನ ಇತಿಹಾಸದ ಚೌಟರಸರ ಕಾಲದಲ್ಲಿ ೫ ಮಂದಿ ಅಬ್ಬಕ್ಕ ದೇವಿಯರ ಉಲ್ಲೇಖಗಳಿವೆ. ಇತಿಹಾಸ ಅಧ್ಯಯನದ ದೃಷ್ಟಿಯಿಂದ ಉಳ್ಳಾಲದಲ್ಲಿದ್ದ ಅಬ್ಬಕ್ಕ ಮತ್ತು ಆಕೆಯ ಪುತ್ರಿ ಮಣೆಲ್‌ನ ಅಬ್ಬಕ್ಕ ದೇವಿಯವರು ಹೆಚ್ಚು ಪ್ರಸ್ತುತರಾಗುತ್ತಾರೆ. ಹಿರಿಯ ಅಬ್ಬಕ್ಕರ ಕಾಲ ೧೫೫೪-೧೫೮೪ ಆಗಿದ್ದರೆ ೨ನೇ ಅಬ್ಬಕ್ಕರ ಕಾಲ ೧೫೯೫-೧೬೪೦ ಆಗಿದೆ. ಉಳ್ಳಾಲದಲ್ಲಿ ಇತ್ತೀಚೆಗೆ ನಡೆದಿರುವುದು ತಾಯಿ ಅಬ್ಬಕ್ಕರ(ಹಿರಿಯ ಅಬ್ಬಕ್ಕ) ೫೦೦ ವರ್ಷಾಚರಣೆ. ಮುಂದೆ ೨ನೇ ಅಬ್ಬಕ್ಕರ ೫೦೦ ವರ್ಷಗಳ ಆಚರಣೆ ಮಣೆಲ್‌ನಲ್ಲಿ ಆಗಬೇಕಿದೆ. ಭಾರತ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಈ ಇಬ್ಬರು ಅಬ್ಬಕ್ಕ ಪ್ರಸ್ತುತ ಎಂಬುದು ಅಧ್ಯಯಗಳಿಂದ ಸಾಬೀತಾಗಿರುವ ಸಂಗತಿ. ಮಣೆಲ್‌ನ ಅಬ್ಬಕ್ಕರ ಬಗ್ಗೆ ಇಟಲಿಯ ಪ್ರವಾಸಿ ಪಿಯಾತ್ರೋ ಡೆಲ್ಲವೆಲ್ಲೆ ಅವರು ತಮ್ಮ ಪ್ರವಾಸ ಗ್ರಂಥದಲ್ಲಿ ಎಳೆಎಳೆಯಾಗಿ ಬರೆದಿದ್ದಾರೆ. ಅವರು ೧೬೨೮ರಲ್ಲಿ ಮಂಗಳೂರಿನ ಮಣೆಲ್‌ಗೆ ಬಂದಿದ್ದರು. ಅಬ್ಬಕ್ಕ ದೇವಿಯರ ಬಗ್ಗೆ ಅಧ್ಯಯನ ಪೂರ್ಣವಾಗಿಲ್ಲ. ವೈಭವೀಕರಣದ ಬದಲಾಗಿ ವಸ್ತುನಿಷ್ಠ ಅಧ್ಯಯನ ಆಗಬೇಕಿದೆ. ಅದಕ್ಕಾಗಿ ಮೂಲ ಆಕರಗಳತ್ತ ಹೋಗಬೇಕು ಎಂದರು.
