ಬಂಟ್ವಾಳ: ಎರಡುದಿನಗಳ ಹಿಂದೆ ಸಿಡಿಲಾಘತದಿಂದ  ಹಾನಿಯಾದ ಮಹೋತಭಾರ ಶ್ರೀ ಕಾರಿಂಜೇಶ್ವರ ಹಾಗೂ
ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ  ತಹಶಿಲ್ದಾರ್ ಮಂಜುನಾಥ್ ಅವರು ಜೊತೆಗಿದ್ದರು.

ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿದರು.ಬಳಿಕ ಸುದ್ದಿಗಾರರೊಂದಿಗೆ   ಮಾತನಾಡಿದ ಅವರು
ಇತಿಹಾಸ ಪ್ರಸಿದ್ದ ಕಾರಿಂಜ ಕ್ಷೇತ್ರದ ಮೇಲ್ಭಾಗದ ಕಲಶದ ಭಾಗಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಇದನ್ನು ಶೀಘ್ರ ಸರಿಪಡಿಸಬೇಕಾಗಿರುವ ನೆಲೆಯಲ್ಲಿ  ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು, ಇದೆಲ್ಲದಕ್ಕೆ ಪೂರಕವಾಗಿ ಪ್ರಶ್ನಾಚಿಂತನೆಯನ್ನಿರಿಸಿ ಮುಂದಿನ ಕ್ರಮಗಳ ಬಗ್ಗೆ ಅವಲೋಕಿಸಲು ಊರಿನವರು ಅಭಿಪ್ರಾಯಪಟ್ಟಿದ್ದಾರೆ ಎಂದರು.
ಸರಕಾರ ಮಟ್ಟದಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಚಿವರ ಜೊತೆಗೆ ಮಾತನಾಡಿ ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿಯು ಶಾಸಕ ರಾಜೇಶ್ ನಾಯ್ಕಗ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾರಿಂಜೇಶ್ವರ  ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷವೀರೇಂದ್ರ ಅಮೀನ್ ,  ಸಮಿತಿಯ ಸದಸ್ಯರಾದ ಜನಾರ್ದನ ಆಚಾರ್ಯ,ರಾಧಾ ಆಚಾರ್ಯ, ಬಿಜೆಪಿ ಬಂಟ್ವಾಳ ಮಂಡಲದ  ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ,  ಮಾಧ್ಯಮ ಪ್ರಮುಖ್  ಪುರುಷೋತ್ತಮ ಶೆಟ್ಟಿ ವಾಮದಪದವು, ಬಿಜೆಪಿ ಪ್ರಮುಖರಾದ ಪ್ರಕಾಶ್ ಅಂಚನ್, ಪ್ರಣಾಮ್ ಅಜ್ಜಿಬೆಟ್ಟು ,ಕಾವಳಪಡೂರು ಸೊಸೈಟಿ ಅಧ್ಯಕ್ಷ ಪ್ರಮೋದ್ ರೈ ಕಾಡಬೆಟ್ಟು , ಕಾವಳಪಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ಶರ್ಮಾ,   ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಜಿತ್  ಶೆಟ್ಟಿ ಕಾರಿಂಜ ,  ವ್ಯವಸ್ಥಾಪನ ಸಮಿತಿಯ ಮಾಜಿ  ಅಧ್ಯಕ್ಷ  ಜಿನರಾಜ್ ಅರಿಗ ,  ಮಾಜಿ  ಸದಸ್ಯರದ ರಾಘವೇಂದ್ರ ನಾಯ್ಕ,ಕಾವಳಮೂಡೂರು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರಾದ ಜಯಪ್ರಸನ್ನ ನಿಡ್ವಾಲ್,  ಸತೀಶ್ ಶೆಟ್ಟಿ ಮಧ್ವ,  ಚಂದಪ್ಪ ಮೂಲ್ಯ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಮೋಹನ್ ಆಚಾರ್ಯ, ಪ್ರಮುಖರಾದ ಗೋಪಾಲ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಕುತ್ರಿಮಾರ್, ಶಾಂತಿಕ್ ಜೈನ್, ಸತೀಶ್ ಕಾರಿಂಜ,ಸಂತೋಷ್,ವಿನಯ್ ಮ್ಯಾನೇಜರ್, ಹಾಗೂ ಅರ್ಚಕ ವೃಂದದವರು ಉಪಸ್ಥಿತರಿದ್ದರು.
ಇಳಿಯೂರು:
ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬೇಟಿ ಪರಿಶೀಲನೆ ನಡೆಸಿದ ಬಳಿಕ ಸ್ಥಳೀಯರೊಂದಿಗೆ ಚರ್ಚಿಸಿದರು.
ಸಿಡಿಲಿನಿಂದ ಹಾನಿಯಾಗಿರುವ ದೇವರ ಗರ್ಭಗುಡಿಯ ಪ್ರಾಕಾರವನ್ನು  ಶೀಘ್ರವಾಗಿ ಸರಿಪಡಿಸುವ ನಿಟ್ಟಿನಲ್ಲಿ ನಷ್ಟದ ವಿವರವನ್ನು‌ ನೀಡಬೇಕು‌‌. ಮತ್ತು ತುರ್ತಾಗಿ ಆಗಬೇಕಿರುವ  ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು.
ದೇವಸ್ಥಾನದ ಗರ್ಭಗುಡಿಯ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಂದುವರಿಯಲು ಗ್ರಾಮಸ್ಥರ ಕೂಡುವಿಕೆಯಲ್ಲಿ  ಸ್ಥಳದಲ್ಲಿ ಪ್ರಶ್ನಾಚಿಂತನೆ ನಡೆಸುವುದರ ಬಗ್ಗೆ ಚರ್ಚಿಸಿದರು.
ದೇವಸ್ಥಾನದ ಆಡಳಿತ ಸಮಿತಿ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲು ಗುತ್ತು,  ಟ್ರಸ್ಟಿಗಳಾದ  ಶಿವರಾಮ ಶೆಟ್ಟಿ, ಲಾವಣ್ಯ ಬಲ್ಲಾಳ್, ಶಿವಪ್ಪ ಪೂಜಾರಿ, ಜಯನಾಯ್ಕ್,ಲಿಂಗಪ್ಪ ಪೂಜಾರಿ,  ಪ್ರಮುಖರಾದ ಸುದರ್ಶನ ಬಜ,ಪ್ರಕಾಶ್ ಅಂಚನ್,  ಶಾಂತಪ್ಪ ಪೂಜಾರಿ, ಧನಂಜಯ ಶೆಟ್ಟಿ ಸರಪಾಡಿ, ಶಶಿಕಾಂತ್ ಶೆಟ್ಟಿ ಆರ್ಮುಡಿ, ರಾಮಕೃಷ್ಣ ಮಯ್ಯ, ಸುರೇಖಾ ಹೆಗ್ಡೆ, ಶಿವಪ್ಪ ಪೂಜಾರಿ ಜೇಡರಬೆಟ್ಟು, ಜಯರಾಮ ಅಡಪ ದೆಚ್ಚಾರು, ತಿಲಕ್ ಬಂಗೇರ, ಮೋನಪ್ಪ‌ ಪೂಜಾರಿ, ಸಂಜೀವ ಪೂಜಾರಿ, ವಸಂತ ದೆಚ್ಚಾರು, ಆನಂದ ಪೂಜಾರಿ ಅಲ್ಲಂಗಾರು, ಸಂತೋಷ್ ಕುಲಾಲ್, ಸುಜಿತ್ ಕಡಮಾಜೆ  ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *