ಬಂಟ್ವಾಳ: ಧಾರ್ಮಿಕತೆಯಲ್ಲಿ ಭಜನೆಗೆ ವಿಶಿಷ್ಟ ಶಕ್ತಿ ಇದ್ದು, ಭಜನೆಯಲ್ಲಿ ಶ್ರೀಮಂತ, ಬಡವ, ಮೇಲು ಕೀಳು ಎಂಬ ಯಾವುದೇ ತಾರತಮ್ಯವು ಇಲ್ಲ,ಭಕ್ತಿಯಿಂದ ಮಾಡುವ ಭಜನೆಯಿಂದ ದೇವರನ್ನು ಹತ್ತಿರದಿಂದ ಕಾಣಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಮನೆಯಲ್ಲು ಭಜನೆ ಹಾಡುವ ಮೂಲಕ ದೇವರಿಗೆ ಹತ್ತಿರವಾಗಿ ರಾಷ್ಟ್ರ ಕಾರ್ಯಕ್ಕೆ ಪ್ರತಿಯೋರ್ವರು ಸನ್ನದ್ದರಾಗಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಕೋರ್ಯಾರು ಶ್ರೀ ದುರ್ಗಾ ಮಹಮ್ಮಾಯಿ ದೇವಸ್ಥಾನದಲ್ಲಿ  ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಪ್ರಯುಕ್ತ ತತ್ವಮಸಿ ಶ್ರೀ ಅಯ್ಯಪ್ಪ ಭಜಕ ವೃಂದ ಪೊಳಲಿ ಇದರ ನೇತೃತ್ವದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಏರ್ಪಡಿಸಲಾದ ಭಜನಾ ಸಂಗಮೋತ್ಸವಕ್ಕೆ ದೀಪ ಪ್ರಜ್ವಲನೆಗೈದು ಚಾಲನೆ ನೀಡಿ ಅವರು ಮಾತನಾಡಿದರು.

ಭಜನೆ  ದೇವತಾ ಕಾರ್ಯದ ಪ್ರತೀಕವಾಗಿದ್ದು, ಇದರಲ್ಲಿ ಸ್ಪರ್ಧೆ ಏರ್ಪಡಿಸುವುದು  ಔಚಿತ್ಯ ಪೂರ್ಣವಲ್ಲ ಎಂದ ಅವರು  ಭವಿಷ್ಯದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮಲಿದ್ದು, ಭಾರತವು ವಿಶ್ವ ಗುರುವಾಗುವುದರೊಂದಿಗೆ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳು ಕಡಿಮೆಯಾಗಲಿವೆ ಎಂದು ಅಭಿಪ್ರಾಯ ವ್ಯಕ್ತಪಟ್ಟರು.
ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಗುರಿಕಾರ ಗೋಪಾಲ ಗೌಡ ಕೊರ್ಯಾರು, ಎರಡನೇ ಗುರಿಕಾರ ಓಬಯ್ಯ ಗೌಡ, ಆಡಳಿತ ಮಂಡಳಿ ಮೊಕ್ತೇಸರ ಯಶೋದರ ಗೌಡ ಕೊರ್ಯಾರು, ಆಡಳಿತ ಮಂಡಳಿ ಕಾರ್ಯದರ್ಶಿ ಲೋಕಯ್ಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಮಂಚಕಲ್ಲು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗಂಗಾಧರ ಗೌಡ ಕುಕ್ಕೇಡಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಹೇಮಚಂದ್ರ ಗೌಡ , ಕಾರ್ಯದರ್ಶಿ ಸಂಜೀವ ಎಲ್ಪೇಲು,ಜೀರ್ಣದ್ದಾರ ಸಮಿತಿ ಗೌರವ ಅಧ್ಯಕ್ಷರಾದ ದುರ್ಗಾದಾಸ್ ಶೆಟ್ಟಿ ಕರೆಂಕಜೆ ,ಪ್ರಭಾಕರ ಪ್ರಭು, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಗಣೇಶ್ ಕಣಿಯೂರು,

ಆಡಳಿತ ಸಮಿತಿ ಸದಸ್ಯರಾದ ನಾರಾಯಣ ಗೌಡ ಕೊಡಂಗೆ,ಕರುಣ ಮಂಚಕಲ್ಲು,ಭಾಸ್ಕರ ಕೋರ್ಯಾರು,ಬಾಬು ಹುಂಟೇನಿ,ಗೋಪಾಲಗೌಡ ದೇವಸ,ಮೋಹನ ಕುಂಚಾಡಿ,
ಮಹಿಳಾ ಸಮಿತಿ ಅಧ್ಯಕ್ಷೆ ಶೋಭಾ ಕಲ್ಪನೆ,ಗೌರವಾಧ್ಯಕ್ಷರಾದ ಕುಸುಮ ಕೋರ್ಯಾರು , ಉಷಾ ಅಚ್ಯುತ ಕಿರಣ್, ತಾರಾ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
ದೇವಣ್ಣ ಗೌಡ  ಮೊಯಿಲ್ ಬೆಟ್ಟು ಸ್ವಾಗತಿಸಿ ವಂದಿಸಿದರು.
ಬಂಟ್ಚಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಕೋರ್ಯಾರು ಶ್ರೀ ದುರ್ಗಾ ಮಹಮ್ಮಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರದರ್ಶನ ಪಡೆದು,ಪ್ರಸಾದ ಸ್ವೀಕರಿಸಿದರು.ಕ್ಷೇತ್ರದ ವತಿಯಿಂದ ಶಾಕರನ್ನು ಗೌರವಿಸಲಾಯಿತು.ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಶಾಸಕರ ನಿಧಿಯಿಂದ ೫ ಲಕ್ಚ ರೂ.ಅನುದಾನ ಒದಗಿಸುವುದಾಗಿ ಶಾಸಕ ರಾಜೇಶ್ ನಾಯ್ಕ್ ಪ್ರಕಟಿಸಿದರು.ಬಿಜೆಪಿ ಬಂಟ್ಚಾಳ ಮಂಡಲದ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ,ಸಮಿತಿ ಪದಾಧಿಕಾರಿಗಳು ಹಾಜರಿದ್ದರು. 

By suddi9

Leave a Reply

Your email address will not be published. Required fields are marked *