ಬಂಟ್ವಾಳ: ಸಿದ್ಧಕಟ್ಟೆ ಸಮೀಪದ ಪ್ರಸಿದ್ಧ ಪೂಂಜ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ  ಸಮಾಪನಗೊಂಡಿತು. ಕ್ಷೇತ್ರದ ತಂತ್ರಿ ಬಾಲಕೃಷ್ಣ ಪಾಂಗಣ್ಣಾಯರ ಮಾರ್ಗದರ್ಶನದಲ್ಲಿ ಏ.2ರಿಂದ ಧ್ವಜಾರೋಹಣ ಮೂಲಕ ಆರಂಭಗೊಂಡು ಬಳಿಕ ಚಂಡಿಕಾಯಾಗ, ಚೆಂಡು ಉತ್ಸವ, ದೀಪದ ಬಲಿ, ದರ್ಶನ ಬಲಿ, ಸವಾರಿ ಬಲಿ, ನಡುಬಲಿ, ಮಹಾರಥೋತ್ಸವ ನಡೆಯಿತು. 

ಸೋಮವಾರ ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಕ್ಷೇತ್ರದ ಪಿ.ಕೃಷ್ಣಪ್ರಸಾದ್ ಅಸ್ರಣ್ಣ, ಪ್ರಧಾನ ಅರ್ಚಕ ಪಿ.ಪ್ರಕಾಶ್ ಆಚಾರ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುದರ್ಶನ್ ಶೆಟ್ಟಿ ಹಕ್ಕೇರಿ, ಸದಸ್ಯರಾದ ಉಮೇಶ ಶೆಟ್ಟಿ ಕೊನೆರೊಟ್ಟುಗುತ್ತು, ಸುಧೀಂದ್ರ ಶೆಟ್ಟಿ ಕಲಾಯಿದಡ್ಡ, ಅಶೋಕ್ ಆಚಾರ್ಯ ಸಿದ್ಧಕಟ್ಟೆ, ಸುರೇಶ ನೀರಪಲ್ಕೆ, ರಂಜಿನಿ ದಿವಾಕರ ಮಾದಾಯಿ, ಗೀತಾ ವಿಶ್ವನಾಥ ಉಮನೊಟ್ಟು ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *