ಬಂಟ್ವಾಳ: ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ನೇತೃತ್ವದಲ್ಲಿ ಶನಿವಾರ ಸಂಜೆ ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂ ನಲ್ಲಿ ಬೃಹತ್ ಸೌಹಾರ್ದ ಇಫ್ತಾರ್ ಕೂಟ ನೆರವೇರಿತು.
ಶ್ರೀ ಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಸಂದೇಶ ನೀಡಿ, ಸವಾಲುಗಳ ಮಧ್ಯೆ ಮನುಷ್ಯ ಪರಸ್ಪರ ಪ್ರೀತಿ,ವಿಶ್ವಾಸದಿಂದ ಬದುಕುವುದು ಪ್ರಾಮುಖ್ಯವಾಗಿದೆ.ಎಲ್ಲರೂ ಭಾಗವಹಿಸುವುದರ ಮೂಲಕ ಸೌಹಾರ್ದಕ್ಕೆ ಅರ್ಥ ತುಂಬಬೇಕು ಎಂದರು.ಪ್ರೀತಿಯಿಂದ ದೇವರನ್ನುಕಾಣಬಹುದಾಗಿದೆ.

ಸ್ವಾಮೀಜಿಗಳು,ಧರ್ಮಗುರುಗಳೆಲ್ಲರೂ ನೀಡುವ ಸೌಹಾರ್ಧತೆ,ಶಾಂತಿಯ ಸಂದೇಶವನ್ನು ಅರಿತುಕೊಂಡು ಭಗವಂತನ ಮಕ್ಕಳಾಗಿ ವಿಶ್ವಕ್ಕೆ ಹತ್ತಿರವಾಗಬೇಕು ಎಂದರು.
ಪ್ರಸಕ್ತ ಕಾಲಘಟ್ಟದಲ್ಲಿ ಮಾಜಿ ಸಚಿವರ ಬಿ.ರಮಾನಾಥ ರೈ ಅವರು ಸರ್ವರ ಮನಸ್ಸನ್ನು ಸೆಳೆಯುವ ಮತ್ತು ಐಕ್ಯತೆಯನ್ನು ಮೂಡಿಸುವ ನಿಟ್ಟಿನಲ್ಲಿ ಸೌಹಾರ್ಧ ಇಪ್ತಾರ್ ಕೂಟ ಆಯೋಜಿಸಿರುವುದು ಉತ್ತಮ ಕಾರ್ಯ ಎಂದು ಹೇಳಿದ ಸತವಾಮೀಜಿಯವರು ಸಾಮಾಜಿಕ,ಶೈಕ್ಷಣಿಕ, ಧಾರ್ಮಿಕವಾಗಿ ನಾನಾ ಕಾರ್ಯಕ.ಮಗಳನ್ನು ಮಾಡುತ್ತಾ ಸಮಾಜದಲ್ಲಿ ಸೌಹಾರ್ಧತೆ ಬೆಳೆಸುತ್ತಾ ಬಂದಿರುತ್ತಾರೆ ಎಂದರು.
ಬಂಟ್ವಾಳ ವಲಯ ಪ್ರಧಾನ ಧರ್ಮಗುರು ರೆ.ಫಾ. ವಿಕ್ಟರ್ ಡಿಸೋಜಾ ಮಾತನಾಡಿ,
ಎಲ್ಲಾ ಧರ್ಮದ ತಿರುಳನ್ನು ಆರ್ಥ ಮಾಡಿಕೊಳ್ಳಬೇಕು,ಹಬ್ಬಗಳು ಎಲ್ಲರನ್ನು ಒಟ್ಟಿಗೂಡಿಸುತ್ತದೆ ಎಂದರು.
ಮಂಗಳೂರು ಶಾಂತಿ ಪ್ರಕಾಶನದ ಅದ್ಯಕ್ಷ ಮುಹಮ್ಮದ್ ಕುಂಞ ಮಾತನಾಡಿ ನಿಮ್ಮನ್ನು ನೀವು ನಿಯಂತ್ರಣಿಸುವುದೇ ಉಪವಾಸದ ಮುಖ್ಯ ಉದ್ದೇಶವಾಗಿದೆ. ದ್ವೇಷವನ್ನು ದೂರಮಾಡಿ, ಮನುಷ್ಯತ್ವವನ್ನು ಬೆಳೆಸುವ, ಅಪನಂಬಿಕೆಗಳನ್ನು ಹೋಗಲಾಡಿಸಲು,ಏಕತೆಯನ್ನು ಬಲಪಡಿಸಲು ಇಂತಹ ಇಪ್ತಾರ್ ಕೂಟಗಳು ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ. ರಮಾನಾಥ ರೈ ಮಾತನಾಡಿ, ಸೌಹಾರ್ದ ಎಂಬ ಪದಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಇಪ್ತಾರ್ ಕೂಟ ಆಯೋಜಿಸಲಾಗಿದೆ. ಧಾರ್ಮಿಕ ಮುಖಂಡರುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿ ಜೀವಿಸಬೇಕು ಎಂಬುದೇ ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದರು.

ಪ್ರಮುಖರಾದ ನೆಹರು ನಗರ ಮಸೀದಿ ಖತೀಬ್ ದಾವೂದ್ ಇಸ್ಮಾಯಿಲ್ ಫೈಝಿ ಪದ್ಮರಾಜ್ ಆರ್ ಪೂಜಾರಿ,ಯು.ಟಿ.ಇಪ್ತಿಕರ್, ಅಶ್ವನಿಕುಮಾರ್ ರೈ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಪಿಯೂಸ್ ಎಲ್ ರೊಡ್ರಿಗಸ್, ಬೇಬಿಕುಂದರ್, ಅಬ್ಬಾಸ್ ಆಲಿ, ನವಾಜ್ ಬಡಕಬೈಲು, ಮಹಮ್ಮದ್ ನಂದಾವರ,ಸುದೀಪ್ ಕುಮಾರ್ ಶೆಟ್ಟಿ,ಪದ್ಮನಾಭ ರೈ,ಜಯಂತಿ ಪೂಜಾರಿ, ಶೈಲಜಾ ರಾಜೇಶ್, ಐಡಾ ಸುರೇಶ್,ಪದ್ಮಶೇಖರ ಜೈನ್,ಚಂದ್ರಶೇಖರ ಪೂಜಾರಿ,ಶಶಿಧರ ಹೆಗ್ಡೆ,ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ
ರಾಜಕೀಯ ಸಾಮಾಜಿಕ ಮುಖಂಡರು ಭಾಗವಹಿಸಿದ್ದರು.
ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
