ಬಂಟ್ವಾಳ: ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುವುದರೊಂದಿಗೆ ಇತರ ಕ್ಷೇತ್ರಗಳಲ್ಲೂ ಸಹಕಾರ ಕ್ಷೇತ್ರವನ್ನು ಪಸರಿಸಿಕೊಂಡು ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿ ಸಲ್ಲಿಸಿರುವ ಸಮಾಜ ಸೇವೆಯನ್ನು ಪರಿಗಣಿಸಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರನ್ನು ಸ್ಪಸ್ಟಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ವತಿಯಿಂದ ಜರಗಿದ ಸಾಮೂಹಿಕ ವಿವಾಹ ಸಂದರ್ಭದಲ್ಲಿ ರಾಜ್ಯ ಮಟ್ಟದ” ಸ್ವಸ್ತಿಕ್ ಸಂಭ್ರಮ ಪುರಸ್ಕಾರ- 2026″ ನೀಡಿ ಗೌರವಿಸಲಾಯಿತು

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪಾಡಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ರವಿಶಂಕರ್‌ಶೆಟ್ಟಿಬಡಾಜೆಗುತ್ತು, ಸ್ವಸ್ಟಿಕ್ ಪ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ, ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಬಿಜೆಪಿ ಮುಖಂಡ ಸಂದೇಶಶೆಟ್ಟಿ ಅರೆಬೆಟ್ಡು, ಪ್ರಮುಖರಾದ ಹರೀಂದ್ರ ಪೈ, ವಾಲ್ಟರ್‌ನಂದಳಿಕೆ, ಕಿರಣ್ ಚಂದ್ರ ಪುಷ್ಪಗಿರಿ, ಜಗನ್ನಾಥ ಶೆಟ್ಟಿ, ಪುನೀತ್ ಕುಮಾರ್, ಶಾರದಾ, ಗೀತಾ ಹೆಗ್ಡೆ, ಅಬ್ದುಲ್ ಹಮೀದ್ ಮೋಹನ್ ಶೆಟ್ಟಿ, ಹೇಮಂತ್ ಕುಮಾರ್, ಸತೀಶ್ ಬಂಗೇರ, ಚಂದ್ರಶೇಖರ ಶೆಟ್ಟಿಗಾರ್, ಮಾದವ ಬಂಗೇರ, ಅಬ್ದುಲ್ಲಾ ಪಿ. ಜಯರಾಮ, ರತ್ನಾಕರ, ಶಾಜಿ ಹುಸೈನ್, ಧನ್ ರಾಜ್, ರಫಿಕ್ ಮತ್ತಿತರರಿದ್ದರು. ಪ್ರಭಾಕರ ಸ್ವಾಗತಿಸಿ, ರಾಜೇಶ್ ಬಂಗೇರ ವಂದಿಸಿದರು.
