ಬಂಟ್ವಾಳ:ಭಜನೆಗಳ ಮೂಲಕ ಜನ ಮಾನಸದಲ್ಲಿ ಧಾರ್ಮಿಕ ಭಕ್ತಿ, ಸಂಪ್ರದಾಯ, ಸಂಸ್ಕಾರಗಳು ಉಳಿಯಲು ಸಾಧ್ಯಇದರಿಂದಾಗಿ ಹಿಂದೂ ಸಮಾಜದ ಸಂಘಟನೆಯು ಬಲಿಷ್ಠವಾಗಲಿದೆ ಎಂದು ಬಿಜೆಪಿ ಮುಖಂಡ ಸಂದೇಶ ಶೆಟ್ಟಿ ಅರೆಬೆಟ್ಟು
ಹೇಳಿದ್ದಾರೆ.ತಾಲೂಕಿನ ಕರ್ಪೆ ಗ್ರಾಮದ ನೆಕ್ಲಾಜೆ ಎಂಬಲ್ಲಿ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿ ಕುಣಿತ ಭಜನೆ ತಂಡಗಳನ್ನು ಗೌರವಿಸಿ ಅವರು ಮಾತನಾಡಿದರು
ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತನಾಡಿ ಈ ಹಿಂದೆ ಎಲ್ಲಾ ಮನೆಗಳಲ್ಲಿಯೂ ನಿತ್ಯವೂ ನಡೆಯುತ್ತಿದ್ದ ಭಜನೆಗಳು ಇಂದು ಮಾಯವಾಗುತ್ತಿರುವುದರಿಂದ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿದೆ. ಮುಂದಿನ ಸ್ವಚ್ಚ ಸಮಾಜದ ನಿರ್ಮಾಣಕ್ಕೆ ಮಕ್ಕಳಿಗೆ ಸಂಸ್ಕಾರದ ಪಾಠ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಬರೋಡ ಬ್ಯಾಂಕ್ ಅಧಿಕಾರಿ ಸಂತೋಷ ಕುಮಾರ್ ಚೌಟ ಮಡಂದೂರು, ಸುಂಕದಕಟ್ಟೆ ಮೇಳದ ವ್ಯವಸ್ಥಾಪಕರಾದ ರಮೇಶ ಕುಲಶೇಖರ,ಶಿಕ್ಷಕ ರವೀಂದ್ರ ನಾಯಕ್ ಕಿನ್ನಾಜೆ, ಪ್ರಮುಖರಾದ ಲಿಂಗಪ್ಪ ಪೂಜಾರಿ ನೆಕ್ಲಾಜೆ, ರಾಜೇಂದ್ರ ಪೂಜಾರಿ, ಸುಂದರ ಪೂಜಾರಿ, ಚಂದ್ರಶೇಖರ ಗೌಡ ರಾಯಿ, ಪೊಳಲಿ ಸಂತೋಷ್ , ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ದಾಮೋದರ ಪೂಜಾರಿ ಕರ್ಪೆ ಕಾರ್ಯಕ್ರಮ ನಿರೂಪಿಸಿದರು.
