ಬಂಟ್ವಾಳ :ತುಂಬೆ ಗ್ರಾಮ ಪಂಚಾಯತಿಯ 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ತುಂಬೆ ಗ್ರಾಮದ ಮುಳಿಪಡ್ಪು ಹಿಂದೂ ರುದ್ರಭೂಮಿಗೆ 3 ಲ.ರೂ.ವೆಚ್ಚದಲ್ಲಿ ಶೆಡ್ ಮತ್ತು ಇಂಟರ್ ಲಾಕ್ ಅಳವಡಿಕೆ ಕಾಮಗಾರಿಯ ಉದ್ಘಾಟನೆಯನ್ನು ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಕೇಶವ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಸಾಲ್ಯಾನ್, ನಿಕಟ ಪೂರ್ವ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ, ಸ್ಥಳೀಯ ಸದಸ್ಯರಾದ ಹೇಮಾಲತ, ಅರುಣ್ ಕುಮಾರ್, ಮಾಜಿ ಸದಸ್ಯರಾದ ಮೋನಪ್ಪ ಮಜಿ, ಸ್ಥಳೀಯರಾದ ದೇವದಾಸ್ ತುಂಬೆ, ಅಶೋಕ್ ಕೊಟ್ಟಿಂಜ, ಸಂದೀಪ್ ಕುಲಾಲ್, ಕೃಷ್ಣ ಕುಲಾಲ್, ಹರೀಶ್ ರೊಟ್ಟಿಗುಡ್ಡೆ, ಫ್ರಾನ್ಸಿಸ್ ಮುಳಿಪಡ್ಪು, ಯಶವಂತ ಮುಳಿಪಡ್ಪು, ಗುತ್ತಿಗೆದಾರರಾದ ಪ್ರಶಾಂತ್ ಕೊಟ್ಟಾರಿ ಉಪಸ್ಥಿತರಿದ್ದರು.
