ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ೧೩೪ನೇ ರಕ್ತದಾನ ಶಿಬಿರ ಭಾನುವಾರ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.

ರೋಟರಿ ಜಿಲ್ಲಾ ಮಾಜಿ ಗವರ್ನರ್ ಎನ್. ಪ್ರಕಾಶ್ ಕಾರಂತ್ ಶಿಬಿರ ಉದ್ಘಾಟಿಸಿದರು. ಅವರು ಮಾತನಾಡಿ ಸೇವಾಂಜಲಿ ಸಂಸ್ಥೆ ಅವಶ್ಯಕತೆಗನುಗುಣವಾಗಿ ರಕ್ತದಾನ ಶಿಬಿರವನ್ನು ಸಂಘಟಿಸುತ್ತಿದ್ದು ರಕ್ತದಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು. ಪ್ರಸ್ತುತ ದಿನಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದ್ದು ರಕ್ತಕ್ಕೆ ಪರ್ಯಯವಾದ ವ್ಯವಸ್ಥೆ ಬೇರೊಂದಿಲ್ಲ. ಬೇರೆಯವರು ದಾನ ಮಾಡಿದರಷ್ಟೇ ಅಗತ್ಯವುಳ್ಳವರು ರಕ್ತ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.

ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಜಯರಾಂ ತುಂಬೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸೇವಾಂಜಲಿ ಕೇವಲವೊಂದು ಸಂಸ್ಥೆಯಲ್ಲ, ಅದೊಂದು ಭರವಸೆ. ಕಲೆ, ಸಾಂಸ್ಕöÈತಿಕ, ಆರೋಗ್ಯ, ಶಿಕ್ಷಣ, ರಕ್ತದಾನ ಮೊದಲಾದ ಕ್ಷೇತ್ರಗಳಲ್ಲಿ ಸೇವೆಯನ್ನು ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಸೇವಾAಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಯುವಕರನ್ನು ರಕ್ತದಾನ ಮಾಡುವಂತೆ ಪ್ರೇರೆಪಿಸುವ ಕಾರ್ಯವನ್ನು ಸೇವಾಂಜಲಿ ಸಂಸ್ಥೆ ಮಾಡುತ್ತಿದ್ದು ಅಗತ್ಯವಿರುವವರಿಗೆ ತುರ್ತು ಸಂದರ್ಭದಲ್ಲಿ ರಕ್ತ ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಕೆ.ಎA.ಸಿ. ಆಸ್ಪತ್ರೆಯ ಬ್ಲಡ್ ಬ್ಯಾಂಕಿನ ಡಾ. ಕೆವಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಎಸ್ಪಿ ಕಚೇರಿಯ ಜಗನ್ನಾಥ ಶೆಟ್ಟಿ, ಸ್ಕಾ÷್ಯಡ್ಸ್ ಮ್ಯಾನೇಜರ್ ರಂಜಿತ್ ರೈ

ರಾಜೇಶ್ ಸುಜೀರ್ ಕೊಡಂಗೆ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಸುನೀಲ್ ಕುಮ್ಡೇಲು, ಶೇಖರ ಪೂಜಾರಿ ಕಲ್ಲತಡಮೆ ಸಂದೀಪ್, ದಿನೇಶ್ ಶೆಟ್ಟಿ ಕೊಟ್ಟಿಂಜ, ಪ್ರಶಾಂತ್ ತುಂಬೆ, ನಾರಾಯಣ ಬಡ್ಡೂರು, ಶಿವರಾಜ್ ಸುಜೀರ್, ಪ್ರವೀಣ್ ಬಿ. ತುಂಬೆ, ವಿಜೇತ್ ತುಂಬೆ, ಕೃಷ್ಣ ಪೊಳಲಿ, ಸೂರಜ್ ಪೊಳಲಿ, ಗಗನ್ ಸುಭಾಷ್ ವಾಮದಪದವು, ಸೀತರಾಮ್, ಪ್ರಶಾಂತ್ ಫ್ರಾಂಕ್ ಉಪಸ್ಥಿತರಿದ್ದರು. ದೇವದಾಸ್ ಶೆಟ್ಟಿ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು. ಶಿಬರದಲ್ಲಿ ಒಟ್ಟು ೭೩ ಯುನಿಟ್ ರಕ್ತ ಸಂಗ್ರಹವಾಯಿತು.

By suddi9

Leave a Reply

Your email address will not be published. Required fields are marked *