ಬಂಟ್ವಾಳ:   ಸಜೀಪ ಮೂಡ ಗ್ರಾಮದ ಮಿತ್ತಮಜಲು ಶ್ರೀ ನಡಿಯೆಳು ದೈವಂಗಳು ಶ್ರೀ ಉಳ್ಳಾಲ್ತಿ ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರದ ದೈವಗಳ  ಕ್ಷೇತ್ರದಲ್ಲಿ ದೈವಂಗಳ ನೂತನ ಸ್ವರ್ಣ ಬಿಂಬ ನಿರ್ಮಾಣದ ಅಂಗವಾಗಿ ಅನುಜ್ಞಾಕಲಶ ಪ್ರಾರ್ಥನಾ ಸಂಕೋಚ ಬ್ರಹ್ಮಶ್ರೀ ನೀಲೇಶ್ವರ ಕೆ.ಯು. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಸಲಾಯಿತು.


ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಪಾಲೆ ಮಂಟಪ ಸಂಸಾರ ಪ್ರಧಾನರಾದ ಕಾಂತಾಡಿಗುತ್ತು ಗಣೇಶ್ ನಾಯಕ್ ಯಾನೆ ಉಗ್ಗಶೆಟ್ಟಿ, ಬಿಜಂದಾರ್ ಗುತ್ತು ಶಿವರಾಮ ಭಂಡಾರಿ, ಸಜೀಪಗುತ್ತು ಗಡಿಪ್ರದಾನ ರಾಧ ಮುತ್ತಣ್ಣ ಶೆಟ್ಟಿಯಾನೆ ಕಾಳಪ್ಪ ಶೆಟ್ಟಿ, ಮಾಡದಾರುಗುತ್ತು ಯಶೋಧರ ರೈ, ನಗ್ರಿಗುತ್ತು ಜಯರಾಮ ಶೆಟ್ಟಿ,ನಗ್ರಿಗುತ್ತು ವಿವೇಕ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಸಂಕೇಶ ,ಜೀವನ್ ಆಳ್ವಮೊದಲಾದ ಗು ತ್ತುಮನೆತನದವರು ಹಾಗೂ ಜೀರ್ಣೋದ್ಧಾರ ಸಮಿತಿಯವರು ಉಪಸ್ಥಿತರಿದ್ದರು 
 
 
 
 

By suddi9

Leave a Reply

Your email address will not be published. Required fields are marked *