ಬಂಟ್ವಾಳ:ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಜೊತೆಗೆ ದಾನಿಗಳ ನೆರವಿನಲ್ಲಿ ಅಂಗ್ಲ ಮಾಧ್ಯಮ ಸಹಿತ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಂ. ದುರ್ಗಾದಾಸ್ ಶೆಟ್ಟಿ ಮಾವಂತೂರು ಹೇಳಿದ್ದಾರೆ.

ಇಲ್ಲಿನ ಕೊಯಿಲ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫೆನಾರ್ಂಡಿಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ಲಬ್ಬಿನ ಮಾಜಿ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್, ತಾ. ಪಂ. ಮಾಜಿ ಸದಸ್ಯ ವಸಂತ ಕುಮಾರ್ ಅನ್ನಳಿಕೆ, ಗ್ರಾ. ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಮಾಜಿ ಉಪಾಧ್ಯಕ್ಷ ಡೊಂಬಯ ಅರಳ ಶುಭ ಹಾರೈಸಿದರು.
ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ ಮಡಂದೂರು, ಮೂರ್ತೆದಾರರ ಸೊಸೈಟಿ ಅಧ್ಯಕ್ಷ ಜಗದೀಶ್ ಕೊಯಿಲ, ರೋಟರಿ ಕ್ಲಬ್ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ, ಪ್ರಮುಖರಾದ ಶರತ್ ಕುಮಾರ್ ಕೊಯಿಲ, ರವೀಂದ್ರ ಪೂಜಾರಿ ಬದನಡಿ, ಜಿ. ದಾಮೋದರ ಬಂಗೇರ, ರಾಜೇಶ್ ಜೈನ್ ಪಡ್ರಾಯಿ, ರಮೇಶ್ ಗೌಡ ಮೀಯಾಲು, ಸುರೇಶ ಪೂಜಾರಿ, ಭೋಜರಾಜ ಶೆಟ್ಟಿ, ಲ್ಯಾನ್ಸಿ ಕುವೆಲ್ಲೋ, ಸಿ ಆರ್ ಪಿ ಪ್ರೇಮಲತಾ, ನಿವೃತ್ತ ಶಿಕ್ಷಕ ಬಾಲಕೃಷ್ಣ, ಜಿ. ಪಂ. ಎಂಜಿನಿಯರ್ ಕೃಷ್ಣ ಎಂ. ಮತ್ತಿತರರು ಇದ್ದರು.
ಇದೇ ವೇಳೆ ಗರಿಷ್ಟ ಅಂಕ ಗಳಿಸಿದ ಮತ್ತು ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
