ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವ ಮತ್ತು ದಾನಿಗಳ ನೆರವಿನಲ್ಲಿ ‘ಆಂಬುಲೆನ್ಸ್ ಲೋಕಾರ್ಪಣೆ’ ಕಾರ್ಯಕ್ರಮ  ನಡೆಯಿತು. 

 ಮಾಜಿ ಸಚಿವ ಬಿ.ರಮಾನಾಥ ರೈ ಆಂಬುಲೆನ್ಸ್ ಲೋಕಾರ್ಪಣೆಗೊಳಿಸಿ ಮಾತನಾಡಿ, ‘ ಸಮಾಜಮುಖಿ ಸೇವಾ ಮನೋಭಾವ ಹೊಂದಿರುವ ಸಂಘಟನೆಗಳು ಮತ್ತು ದಾನಿಗಳು ನೀಡಿದ ಕೊಡುಗೆ ಅಮೂಲ್ಯವಾಗಿದೆ ಎಂದರು. ಸಿದ್ಧಕಟ್ಟೆ-ರಾಯಿ ಲಯನ್ಸ್ ಕ್ಲಬ್ ಸಹಿತ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ಸ್ಥಳೀಯ ದಾನಿಗಳ ನೆರವಿನಿಂದ ಆಂಬುಲೆನ್ಸ್ ಸೇವೆ ಲೋಕಾರ್ಪಣೆಗೊಳಿಸಲು ಸಾಧ್ಯವಾಗಿದೆ ಎಂದು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಜಗದೀಶ ಕೊಯಿಲ ತಿಳಿಸಿದರು.

ಇದೇ ವೇಳೆ 3 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಬೂಡ ಅಧ್ಯಕ್ಷ ಬೇಬಿ ಕುಂದರ್, ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಶಾರದೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ, ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ದುಗರ್ಾದಾಸ್ ಶೆಟ್ಟಿ ಕರೆಂಕಿಜೆ, ವಲಯ ಬಿಲ್ಲವ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ, ಲಯನ್ ವಲಯಾಧ್ಯಕ್ಷ ನೋಯೆಲ್ ಲೋಬೊ, ಪ್ರಮುಖರಾದ ಫೆಲಿಕ್ಸ್ ಜಾನ್ ಸಿರಿಲ್, ಅನಿಲ್ ಕುಮಾರ್ ಪ್ರಭು ರಾಯಿ, ದಿನೇಶ ಶೆಟ್ಟಿಗಾರ್, ಕೆ.ರಮೇಶ ನಾಯಕ್ ರಾಯಿ, ಸುರೇಶ ಶೆಟ್ಟಿ ಕುತ್ಲೋಡಿ, ನೋಣಯ ಶೆಟ್ಟಿಗಾರ್, ಚಂದ್ರಶೇಖರ ಆಚಾರ್ಯ ಮತ್ತಿತರರು ಇದ್ದರು. 

 ಲಯನ್ಸ್ ಕ್ಲಬ್ ಅಧ್ಯಕ್ಷ ಚಂದಪ್ಪ ಮೂಲ್ಯ ಸ್ವಾಗತಿಸಿ, ಅರುಣ್ ಮಂಜಿಲಾ ವಂದಿಸಿದರು.  

By suddi9

Leave a Reply

Your email address will not be published. Required fields are marked *