ಬಂಟ್ವಾಳ:ರಾಜ್ಯದಲ್ಲಿ ವಿವಿಧ ದೇವಸ್ಥಾನ ಮತ್ತು ದೈವಸ್ಥಾನ ಮತ್ತಿತರ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಆಡಳಿತ ನಡೆಸುವಲ್ಲಿ ರಾಜಕೀಯ ಹಿಂಬಾಲಕರನ್ನು ನೇಮಿಸುವ ಪ್ರವೃತ್ತಿ ಬೆಳೆದು ಬಂದಿದ್ದು, ಇದು ದೇವಳದ ಅಭಿವೃದ್ಧಿ ಮತ್ತು ಸಮಾಜದ ಪ್ರಗತಿಗೆ ಮಾರಕವಾಗಿದೆ. ಇದರಿಂದಾಗಿ ಧಾರ್ಮಿಕತೆಯಲ್ಲಿ ರಾಜಕೀಯಕ್ಕೆ ಬದಲಾಗಿ ಕೇವಲ ಭಕ್ತಿ ಮತ್ತು ನಂಬಿಕೆಗೆ ಶಕ್ತಿ ತುಂಬುವ ಮಹತ್ತರ ಕೆಲಸಕ್ಕೆ ಧಾರ್ಮಿಕ ಪರಿಷತ್ ಮುಂದಾಗಿದೆ ಎಂದು ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ ಕ್ಷೇತ್ರದ ಗಡಿಪ್ರಧಾನ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಬಡಾಜೆ ರವಿಶಂಕರ ಶೆಟ್ಟಿ ಹೇಳಿದ್ದಾರೆ.


ಇಲ್ಲಿನ ರಾಯಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಕೊಯಿಲ ದಸರಾ’ ಶೋಭಾಯಾತ್ರೆ ಪ್ರಯುಕ್ತ ಶ್ರೀಯಾ ಗರ‍್ಡನ್ ಸಭಾಂಗಣದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈಗಾಗಲೇ ರಾಜ್ಯದ ‘ಎ’ ದರ್ಜೆ ದೇವಸ್ಥಾನಗಳಿಗೆ ತೆರಳಿ ಅಲ್ಲಿನ ಧಾರ್ಮಿಕ ಸ್ಥಿತಿಗತಿ ಮತ್ತು ವಿವಿಧ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು.


ಟ್ರಸ್ಟ್ ಅಧ್ಯಕ್ಷ ಕೆ.ಪರಮೇಶ್ವರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಮಂಗ್ಲಿಮಾರ್ ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ ಕ್ಷೇತ್ರದ ಗಡಿಪ್ರಧಾನ ಬಡಾಜೆ ರವಿಶಂಕರ ಶೆಟ್ಟಿ ಮತ್ತು ಮಾವಂತೂರು ಬಲವಂಡಿ ಕ್ಷೇತ್ರದ ಗಡಿ ಪ್ರಧಾನ ಎಂ.ದುರ್ಗಾದಾಸ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

ಗರಿಷ್ಟ ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಮತ್ತು ಪಿಯೂಸಿ ವಿದ್ಯಾರ್ಥಿಗಳಿಗೆ ಮುಂಬೈ ಶ್ರೀನಿವಾಸ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಿಸಲಾಯಿತು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಮುಡ್ರಾಯಿಬೀಡು, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್, ಬಂಟರ ಸಂಘದ ವಲಯಾಧ್ಯಕ್ಷ ರಾಜೇಶ ಶೆಟ್ಟಿ ಶೀತಾಳ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಗೌಡರ ಯಾನೆ ಒಕ್ಕಲಿಗರ ಸಂಘದ ವಲಯಾಧ್ಯಕ್ಷ ವಸಂತ ಗೌಡ ಮುದ್ದಾಜೆ,ರಾಯಿ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವೇಂದ್ರ ಪೂಜಾರಿ, ಗ್ರಾ.ಪಂ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ದೈವ ಪಾತ್ರಿ ಉಮಾನಾಥ ಬೆಳ್ಳೂರು ಶುಭ ಹಾರೈಸಿದರು.


ಟ್ರಸ್ಟಿ ಮಧುಕರ ಬಂಗೇರ, ವಸಂತ ಕುಮಾರ್ ಅಣ್ಣಳಿಕೆ, ಹರೀಶ ಆಚರ್ಯ ರಾಯಿ, ರಾಘವ ಅಮೀನ್, ಕೃಷ್ಣಪ್ಪ ಪೂಜಾರಿ ಕಾರಂಬಡೆ, ಚಂದಪ್ಪ ಪೂಜಾರಿ ಮಾಬೆಟ್ಟು, ಅರುಣ್ ಕುಮಾರ್ ಮಾಬೆಟ್ಟು, ಸತೀಶ ಬೊಲ್ಪೊಟ್ಟು, ಮತ್ತಿತರರು ಇದ್ದರು.


ಪತ್ರರ‍್ತ ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿ, ಟ್ರಸ್ಟಿ ಪ್ರವೀಣ್ ಅಂಚನ್ ಕೊಯಿಲ ವಂದಿಸಿದರು. ಪ್ರಜ್ವಲ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮ ಬಳಿಕ ಕೈತ್ರೋಡಿ ಭ್ರಾಮರಿ ಕಲಾ ತಂಡ ಮತ್ತು ರಾಯಿ ಧೃತಿ ತಂಡದ ಪುಟಾಣಿಗಳಿಂದ ನೃತ್ಯ ವೈಭವ, ಮಂಜೇಶ್ವರ ಶಾರದಾ ಕಲಾ ತಂಡದಿಂದ ತುಳು ನಾಟಕ ಪ್ರರ‍್ಶನಗೊಂಡಿತು

By suddi9

Leave a Reply

Your email address will not be published. Required fields are marked *