ಬಂಟ್ವಾಳ: ತಾಲೂಕಿನ ವಿಟ್ಲ ಹೋಬಳಿಯ ವೀರಕೆಂಬ ಗ್ರಾಮದ ಸಿಮಾಜಿ ಗುತ್ತು ಪ್ರಫುಲ್ಲ ಪ್ರಕಾಶ್ ರೈ ಇವರ ತಾಕಿನಲ್ಲಿ 2025-26ನೇ ಸಾಲಿನ ನೈಸರ್ಗಿಕ ಕೃಷಿ ಅಭಿಯಾನ ಹಾಗೂ ಬೆಳ್ತಂಗಡಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಹೊರಾಂಗಣ ತರಬೇತಿ ಕಾರ್ಯಕ್ರಮ ಮಂಗಳವಾರ ಜರುಗಿತು.

ವೀರಕಂಬ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಜನಾರ್ದನ ಪೂಜಾರಿ ರವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಗತಿಪರ ಕೃಷಿಕರಾದ ವೀರಕಂಬ ಗ್ರಾಮದ ಸಿಮಾಜಿ ಗುತ್ತು ಪ್ರಫುಲ್ಲ ಪ್ರಕಾಶ್ ರೈ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಬಂಟ್ವಾಳ ತಾಲೂಕಿನ ತಾಂತ್ರಿಕ ಕೃಷಿ ಅಧಿಕಾರಿ ನಂದನ್ ಶೆಣೈ ಅವರು ಇಲಾಖಾ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು. ವೀರಕಂಬ ಗ್ರಾಮದ ಸಿಆರ್ ಪಿಗಳಾದ ಪುಷ್ಪಾವತಿ ಮತ್ತು ನಮಿತ ರವರು ಜೀವಾಮೃತ ಹಾಗೂ ಆಗ್ನಿ ಅಸ್ತ್ರದ ಪ್ರಾತ್ಯಕ್ಷಿಕೆ ನೀಡಿದರು. ರೈತ ಸಂಪನ್ಮೂಲ ವ್ಯಕ್ತಿ ಮನೋಹರ ಶೆಟ್ಟಿ ಎಡಪದವು ಅವರು ನೈನರ್ಗಿಕ ಕೃಷಿ ಪದ್ಧತಿಯಲ್ಲಿ ದ್ರವ ರೂಪದ ಗೊಬ್ಬರಗಳ ತಯಾರಿಕೆ ಕುರಿತು ಮಾಹಿತಿ ನೀಡಿದರು.
ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಗಣೇಶ್ ಅಡಿಗ ರವರು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಹಾಗೂ ರಸಗೊಬ್ಬರದ ಪ್ರಯೋಗಾಲಯದ ಕುರಿತು ಮಾಹಿತಿ ನೀಡಿದರು. ವೀರಕೆಂಬ ಗ್ರಾಮದ ಸಾಂದೀಪನಿ ಪ್ರಗತಿಪರ ಕೃಷಿಕರಾದ ವಿಷ್ಣು ಭಟ್ ರವರು ತಮ್ಮ ಸಹಜ ಕೃಷಿ ಅನುಭವವನ್ನು ಹಂಚಿಕೊಂಡರು.
ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷರೋಹಿತಾಕ್ಷ ಬಂಗ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವೀರಕಂಬ ಹಾಗೂ ಅಳಿಕೆ ಗ್ರಾಮದ ಬಿಆರ್ ಸಿ ವಿನುತ್ ಹಾಜರಿದ್ದರು.ವಿಟ್ಲ ಹೋಬಳಿ ಆತ್ಮ ಯೋಜನೆಯ ವಿರೂಪಾಕ್ಷಿ ಹಡವದ ವಂದಿಸಿದರು. 50ಕ್ಕು ಹೆಚ್ಚು ಮಂದಿ ರೈತರು ಪಾಲ್ಗೊಂಡುಇದರ ಸದುಪಯೋಗ ಪಡೆದರು
