ಬಂಟ್ವಾಳ : ಮಾಣಿ ಸಮೀಪದ ಪಾರ್ಪಕಜೆ ನೂರುಲ್ ಇಸ್ಲಾಂ ಮದ್ರಸ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1500 ನೇ ಜನ್ಮದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮದ್ರಸ ವಠಾರದಲ್ಲಿ ನಡೆಯಿತು.

ಕರುವೇಲು ಬದ್ರಿಯಾ ಜುಮಾ ಮಸೀದಿ ಖತೀಬ್ ಸಯ್ಯಿದ್ ಅಲ್ ಹಾದಿ ಅನಸ್ ತಂಙಳ್ ಸಾಲ್ಮರ ದುಹಾಶೀರ್ವನಗೈದರು. ಸ್ಥಳೀಯ ಮದ್ರಸ ಮುಖ್ಯ ಶಿಕ್ಷಕ ಅಬೂಬಕ್ಕರ್ ಸಅದಿ ಉದ್ಘಾಟಿಸಿದರು.
ಪಾರ್ಪಕಜೆ ನೂರುಲ್ ಇಸ್ಲಾಂ
ಮದ್ರಸ ಕಮಿಟಿ ಉಪಾಧ್ಯಕ್ಷ, ಪುತ್ತೂರು – ಬನ್ನೂರು ಜುಮಾ ಮಸೀದಿ ಅಧ್ಯಕ್ಷ ಖಲಂದರ್ ಅಧ್ಯಕ್ಷತೆ ವಹಿಸಿದ್ದು, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಮುಖ್ಯ ಭಾಷಣ ಗೈದರು.
ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ, ಕಾರ್ಯದರ್ಶಿ ಎಸ್.ಎಂ.ರಫೀಕ್ ಹಾಜಿ ನೇರಳಕಟ್ಟೆ, ಮಾಣಿ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಮಜೀದ್ ದಾರಿಮಿ ಏನಾಜೆ, ಪಾರ್ಪಕಜೆ ನೂರುಲ್ ಇಸ್ಲಾಂ ಮದ್ರಸ ಕಮಿಟಿ ಕಾರ್ಯದರ್ಶಿ ಇಬ್ರಾಹಿಂ ಕರೀಂ, ಇಜಾಝ್ ಮುಹಮ್ಮದ್ ಮಾಣಿ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಸ್ಥಳೀಯ ಮದ್ರಸ ಮುಖ್ಯ ಶಿಕ್ಷಕ ಅಬೂಬಕ್ಕರ್ ಸಅದಿ ಅವರನ್ನು ಗೌರವಿಸಲಾಯಿತು.
ಗಡಿಯಾರ ಜುಮಾ ಮಸೀದಿ ಅಧ್ಯಕ್ಷ ರಿಯಾಝ್ ಕಲ್ಲಾಜೆ ಸ್ವಾಗತಿಸಿ, ವಿದ್ಯಾರ್ಥಿ ಮುಅದ್ ಕಿರಾಅತ್ ಪಠಿಸಿದರು. ರಶೀದ್ ನೀರಪಾದೆ ವಂದಿಸಿ, ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು
