ಬಂಟ್ವಾಳ: ಬಾಲಗೋಕುಲ, ಕುಲಾಲ ಸಮಾಜ ಸೇವಾ ಸಂಘ (ರಿ) ವಗ್ಗ  ಹಾಗೂ ಸಮಾಜ ಸೇವಾ ಸಹಕಾರಿ  ನಿಯಮಿತ ಬ್ಯಾಂಕ್  ಬಂಟ್ವಾಳ ಇದರ ಸಹಭಾಗಿತ್ವದಲ್ಲಿ ಶ್ರೀ ಕ್ಷೇತ್ರ ಕಾರಿಂಜದ ಸುತ್ತಮುತ್ತಲು ಹಾಗೂ ವಗ್ಗ ಪರಿಸರದಲ್ಲಿ ಪರಿಸರ ಪ್ರೇಮಿಗಳ‌ ಸಹಕಾರದಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಯಿತು.


ಈ ಸಂದರ್ಭ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತಲ್ಲದೆ ಮಕ್ಕಳ ಜೊತೆ ಪರಿಸರ ಪ್ರೇಮಿಗಳು ಸೇರಿ ಕಾರಿಂಜ ಕ್ಷೇತ್ರದ ವಾನರಗಳಿಗೆ ಉಪಯೋಗವಾಗುವಂತಹ ವಿವಿಧ ಹಣ್ಣಿನ ಗಿಡ ಹಾಗೂ ಶ್ರೀ ಕ್ಷೇತ್ರದ ವಠಾರದಲ್ಲಿ ತುಳಸಿ, ಹೂವಿನ ಗಿಡಗಳನ್ನು ನಾಟಿ ಮಾಡಲಾಯಿತು.


65 ಮಂದಿ ವಿಧ್ಯಾರ್ಥಿಗಳು 20 ಕ್ಕೂ ಹೆಚ್ಚು  ಪರಿಸರ ಪ್ರೇಮಿಗಳು ಸೇರಿ  200 ಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಲಾಯಿತು.ಸಮಾಜ ಸೇವಾ ಸಹಕಾರಿ ನಿಯಮಿತದ ನಿರ್ದೇಶಕರು, ಬಂಟ್ವಾಳ ತಾಲೂಕು ಬಾಲಗೋಕುಲ‌ ಪ್ರಮುಖರಾದಹರೀಶ್ ಜಾರಬೆಟ್ಟು  ಅವರು ಈ ಕಾರ್ಯಕ್ರಮದ ಅಗತ್ಯತೆಯನ್ನು ವಿವರಿಸಿದರು.


ಕುಲಾಲ ಸಮಾಜಸೇವ ಸಂಘ ವಗ್ಗ  ಇದರ ಅಧ್ಯಕ್ಷರಾದ ಪುರುಷೋತ್ತಮ್ ಕುಲಾಲ್ ಹೆರೋಟ್ಟು,ಭೀಮಶೈಲ ಬಾಲಗೋಕುಲದ ಅಧ್ಯಕ್ಷರಾದ ಗೋಪಾಲ ಶೆಟ್ಟಿ ಕಾರಿಂಜ,  ಸಂಚಾಲಕರಾದ ರಾಘವೇಂದ್ರ ನಾಯಕ್ ಪುವನೊಟ್ಟು, ದಿನೇಶ್  ಬಡೆಗೊಟ್ಟು,ಗೋಪಲ ಶೆಟ್ಟಿ ಕಾರಿಂಜ ಮೊದಲಾದವರು ಉಪಸ್ಥಿತರಿದ್ದರು.


ಬಾಲಗೋಕುಲದ  ಸದಸ್ಯರು  ಹಾಗೂ ಬಾಲಗೋಕುಲದ ಮಾತಾಜಿಗಳಾದ ಕು. ಕೀರ್ತಿ ,ಕು. ಲಿಖಿತ, ಜಯಂತಿ ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *