ಮೂಡುಬಿದರೆ:ಉಲಮಾ ಸಂಘಟನೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಪೋಷಕ ಸಂಘಟನೆಯಾದ ಸಮಸ್ತ ಕನರ್ಾಟಕ ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್ಕೆಎಸ್ಎಸ್ಎಫ್) ಇದರ ಬೆಳ್ಳಿ ಹಬ್ಬ ಸಮಾರಂಭದ ಪ್ರಚಾರಾರ್ಥವಾಗಿ ಮೂಡುಬಿದರೆ ವಲಯ ಮಟ್ಟದ ಪ್ರಚಾರ ಸಮ್ಮೇಳನ ಮೂಡುಬಿದರೆಯ ಲಾಡಿ ಮಸ್ಜಿದುನ್ನೂರು ಬಳಿಯ ಹಾಸ್ಕೋ ಗ್ರೌಂಡ್ನಲ್ಲಿ ಡಿ. 14 ರಂದು ಸಂಜೆ 6 ಗಂಟೆಗೆ ನಡೆಯಲಿದೆ.

ಯುವಕರು ಮತ್ತು ವಿದ್ಯಾಥರ್ಿಗಳನ್ನು ಧರ್ಮದ ನೈಜ ಪಥದಲ್ಲಿ ಮುನ್ನಡೆಸಲು 1989ರಲ್ಲಿ ಸ್ಥಾಪಿತಗೊಂಡಿರುವ ಈ ಸಂಘಟನೆಯು ಪಾಣಕ್ಕಾಡ್ ಅಸ್ಸಯ್ಯಿದ್ ಅಬ್ಬಾಸ್ ಆಲಿ ಶಿಹಾಬ್ ತಂಙಳ್ರವರು ಪ್ರಸಕ್ತವಾಗಿ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ನ್ಯಾಯ, ಪ್ರಜ್ಞೆ ಪರಮ ಜಾಗೃತಿ” ಎಂಬ ಧ್ಯೇಯ ವಾಕ್ಯದೊಂದಿಗೆ ಧಾಮರ್ಿಕ, ಸಾಮಾಜಿಕ, ಶೈಕ್ಷಣಿಕ ಮತ್ತಿತರ ಎಲ್ಲಾ ರಂಗಗಳಲ್ಲಿ ನ್ಯಾಯದ ಪ್ರಜ್ಞೆಯನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ ಎಂದು ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಅಬ್ದುಲ್ ರೆಹಮಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಲಯ ಮಟ್ಟದ ಪ್ರಚಾರ ಸಮ್ಮೇಳನದಲ್ಲಿ ಎಸ್ಕೆಎಸ್ಎಸ್ಎಸ್ ಇಸ್ತಖಾಮಾ ವಿಭಾಗದ ಉಪಾಧ್ಯಕ್ಷರಾದ ಶೌಖತ್ ಅಲಿ ಫೈಝಿ ಮತ್ತು ಎಸ್ಕೆಎಸ್ಎಸ್ಎಫ್ ಕೇಂದ್ರ ಸಮಿತಿಯ ಸದಸ್ಯ ಮಮ್ಮುಟ್ಟಿ ಮಾಸ್ಟರ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಅತ್ರಾಡಿ ಖಾಝಿ ಶೈಖೂನಾ ವಿ.ಕೆ.ಅಬೂಬಕ್ಕರ್ ಮುಸ್ಲಿಯಾರ್ ಮತ್ತು ಸಮಸ್ತ ಕೇರಳ ಶೈಖುನಾ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ಭಾಗವಹಿಸಲಿರುವರು. ಜಂಇಯ್ಯತುಲ್ ಮುಅಲ್ಲಿಮೀನ್ ಮೂಡುಬಿದರೆ ವಲಯ ಅಧ್ಯಕ್ಷ ಮುಸ್ತಾಫ ಯಮಾನಿ ಶುಭಾಶಾಂಸೆ ಗೈಯಲಿದ್ದಾರೆ ಎಂದರು.
ಸ್ವಾಗತ ಸಮಿತಿಯ ಕನ್ವೀನರ್ ಅಬ್ದುಲ್ ಲತೀಫ್, ಕೋಶಾಧಿಕಾರಿ ಡಿ.ಎ.ಉಸ್ಮಾನ್, ಮಹಮ್ಮದ್ ಶಬೀರ್ ಮತ್ತು ಫಾರುಕ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
