ಬಂಟ್ವಾಳ: ವಿದ್ಯಾರ್ಥಿಗಳ ಪ್ರಯಾಣದ ಅನುಕೂಲಕ್ಕಾಗಿ ಬಂಟ್ವಾಳ  ಮುಖ್ಯ ರಸ್ತೆಯಿಂದ ಅರ್ಬಿಗುಡ್ಡೆಯಲ್ಲಿರುವ  ಸರಕಾರಿ ಪಾಲಿಟೆಕ್ನಿಕ್ ಕಾಲೇಜು ವರೆಗೆ ಎಲೆಕ್ಟ್ರಿಕ್ ಮಿನಿಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಭರವಸೆ ನೀಡಿದರು.

ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ೨೦೨೫-೨೬ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘ, ಕ್ರೀಡಾ ಸಂಘ, ಎನ್.ಎಸ್.ಎಸ್. ಮತ್ತು ರೆಡ್ ಕ್ರಾಸ್ ಘಟಕಗಳ ಉದ್ಘಾಟನೆ, ಶಿಕ್ಷಕರ ದಿನಾಚರಣೆ, ಅಭಿಯಂತರರ ದಿನಾಚರಣೆಯೊಂದಿಗೆ ಸಂಸ್ಥೆಗೆ ಸಂಸದರು ಒದಗಿಸಿದ 30 ಕಂಪ್ಯೂಟರ್ ಲ್ಯಾಬ್ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು‌. 

     

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಅಭಿವೃಧ್ಧಿಗಾಗಿ  ೫ ಲಕ್ಷ ರೂ. ಅನುದಾನ ಒದಗಿಸುವುದಾಗಿ ಭರವಸೆ ನೀಡಿದರಲ್ಲದೆ  ಈ ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಲು ಮುಖ್ಯ ರಸ್ತೆಯಿಂದ ಬದಲಿ ರಸ್ತೆ , ಕ್ರೀಡಾಂಗಣಕ್ಕೆ ಅಗತ್ಯವಿರುವ ನಿವೇಶನ ಮತ್ತು ಕ್ರೀಡಾಂಗಣ ನಿರ್ಮಾಣದ ಬಗ್ಗೆಯು ಚಿಂತನೆಯಿದ್ದು,ಸಂಸ್ಥೆಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಹೆಚ್ಚಿನ ಮುತುವರ್ಜಿವಹಿಸ ಲಾಗುವುದು ಎಂದರು. ಬೆಂಜನಪದವು ಕೆನರಾ ಕಾಲೇಜಿನ ಡಾ|| ಬಸಪ್ಪ ಬಿ ಕೊಡದ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶ್ರಮವಹಿಸಿ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರೊಂದಿಗೆ ತಮ್ಮ ಪೋಷಕರನ್ನು ಗೌರವಿಸಿ ಜೀವನ ನಡೆಸುವ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. 

ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ನರಸಿಂಹ ಭಟ್ ಹೆಚ್.  ವಹಿಸಿದ್ದರು.

ಹಿರಿಯ ಶ್ರೇಣಿ ಉಪನ್ಯಾಸಕಿ ಭುವನೇಶ್ವರಿ,   ಪ್ರಸ್ತಾವನೆಗೈದರು. ಭಾಸ್ಕರ ಎಲ್. ಸಿಸ್ಟಂ ಅನಾಲಿಸ್ಟ್ , ಹಮೀದ್ ಡಿ, ಅವರು ಅತಿಥಿಗಳನ್ನು ಪರಿಚಯಿಸಿದರು‌.

 ಉಪನ್ಯಾಸಕರಾದ ಮೋಹನ್ ರಾಜ್ ಜಿ.ಎಸ್. ಸ್ವಾಗತಿಸಿದರು.ಮಹೇಶ್ ವಂದಿಸಿದರು.

ಉಪನ್ಯಾಸಕಿ ಮೃದುಲಾ ವಿ. ಕಾರ್ಯಕ್ರಮವನ್ನು ನಿರೂಪಿಸಿದರು.  ಸುಧಾಕರ ಸಿ.ಎಸ್, ರಿತಿಕ ಕೋಟ್ಯಾನ್ ಎಚ್.  ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ವೇದಿಕೆಯಲ್ಲಿದ್ದರು

By suddi9

Leave a Reply

Your email address will not be published. Required fields are marked *