ಉಳ್ಳಾಲ: ಶ್ರೀ ಸೋಮೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿಯಮಿತ (ರಿ.) ತೊಕ್ಕೊಟ್ಟು ಇದರ ವಾರ್ಷಿಕ ಮಹಾಸಭೆಯು ತೊಕ್ಕೊಟ್ಟು ಕಾಫಿಕಾಡ್ ನಲ್ಲಿರುವ ಪೂಜ್ಯ ಕುದ್ಮಲ್ ರಂಗರಾವ್ ಸಭಾಭವನದಲ್ಲಿ ಭಾನುವಾರ ನಡೆಯಿತು.

ಸಂಘದ ಅಧ್ಯಕ್ಷ ಉಮಾನಾಥ ನಾಯಕ್ ಉಳ್ಳಾಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ಸಂಘವು ಪ್ರಸ್ತುತ ಸಾಲಿನಲ್ಲಿ 5,31,31,149 ರೂ .ವ್ಯವಹಾರ ನಡಸಿ 6,65,321,58 ರೂ .ನಿವ್ವಳ ಲಾಭವನ್ನು ಗಳಿಸಿದೆ.ಅಡಿಟ್ ವರ್ಗಿಕರಣದಲ್ಲಿಯು ” ಎ”ತರಗತಿಯನ್ನು ಪಡೆದಿದೆ.ಇದೇ ವೇಳೆ ಸದಸ್ಯರಿಗೆ ಶೇ. 11 ಡಿವಿಡೆಂಡನ್ನು ಪ್ರಕಟಿಸಿದರು.
ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ಸುರೇಂದ್ರ ನಾಯಕ್ ಕಾಪಿಕಾಡ್,ದಿವಾಕರ ಆಚಾರ್ಯ,ರತ್ನಾಕರ ಅವರನ್ನು ಗೌರವಿಸಲಾಯಿತು.ಈ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ಋಇಭಾ ಪುರಸದಕಾರವನ್ನಿತ್ತು ಅಭಿನಂದಿಸಲಾಯಿತು.
ಉಪಾಧ್ಯಕ್ಷ ಮಿಥಿಲೇಶ್ ನಾಯಕ್ ಮಣ್ಣಗುಡ್ಡೆ,ನಿರ್ದೇಶಕರಾದ ಜೆ.ರವೀಂದ್ರ ನಾಯಕ್,ನರಸಿಂಹ ನಾಯಕ್ ಹರೇಕಳ,ಮುರಳೀಧರ ನಾಯಕ್,ಎಸ್.ಯು.ಲಕ್ಷ್ಮಣ್ ನಾಯಕ್,ಯೋಗೀಶ್ ನಾಯಕ್ ಪಂಪ್ ವೆಲ್,ಅನೂಷ್ ನಾಯಕ್, ಹೇಮಾ ಕೇಶವ ನಾಯಕ್, ಆಶಾ ನಾಯಕ್ ಗೋರಿಗುಡ್ಡೆ ಅವರು ವೇದಿಕೆಯಲ್ಲಿದ್ದರು.
ಸಂಘದ ಕಾರ್ಯದರ್ಶಿ ಲಾವಣ್ಯ ಸ್ವಾಗತಿಸಿ,ವರದಿ ವಾಚಿಸಿ ,ಲೆಕ್ಕಪತ್ರ ಮಂಡಿಸಿದರು.ಸಿಬ್ಬಂದಿ ಪವಿತ್ರ,ಮಂಜುನಾಥ ನಾಯಕ್ ಸಹಕರಿಸಿದರು.
