ಕೈಕಂಬ: ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ(ರಿ)ಕುಪ್ಪೆಪದವು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನಾಚರಣೆಯ ಅಂಗವಾಗಿ ಗುರುಪೂಜೆ, ಭಜನಾ ಸಂಕೀರ್ತನೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಭಾನುವಾರ ಕುಪ್ಪೆಪದವು ಗುರುನಗರದ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತನಾಡಿ,ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದಡಿಯಲ್ಲಿ ಮಾದರಿ ಸಮಾಜವನ್ನು ನಿರ್ಮಿಸಿದ ಮಹಾನ್ ಗುರು ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಗಳನ್ನು ಪಾಲಿಸಿದರೆ ನಮ್ಮ ದೇಶ, ನಮ್ಮ ರಾಜ್ಯ ಶಾಂತಿ, ಸಮೃದ್ಧಿಯ ತಾಣವಾಗಲಿದೆ ಎಂದರು.

ದ.ಕ.ಜಿಲ್ಲಾ ಯುವ ಕಾಂಗ್ರೇಸ್ ಮುಖಂಡ ಗಿರೀಶ್ ಆಳ್ವ ಮಾತನಾಡಿ, ಜಾತಿ, ಜಾತಿಗಳ ನಡುವೆ ಭೇಧಭಾವ, ಅಸ್ಪೃಷ್ಯತೆ ತಾಂಡವವಾಡುತ್ತಿದ್ದ ಸಂಧರ್ಭದಲ್ಲಿ ಜನ್ಮ ತಾಳಿದ ಮಹಾನ್ ಮಾನವತಾವಾದಿ ಗುರುಗಳು ಸಮಾಜದಲ್ಲಿದ್ದ ಮೇಳು-ಕೀಳು ಭಾವನೆಗಳನ್ನು ತೊಡೆದು ಹಾಕುವಲ್ಲಿ ಯಶಸ್ವಿಯಾದರು ಎಂದರು.
ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ಮಾತನಾಡಿ, ಸರ್ವಕಾಲಕ್ಕೂ ಪ್ರಸ್ತುತವಾಗಿರುವ ನಾರಾಯಣಗುರುಗಳ ತತ್ವಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸವಾಗಬೇಕು ಎಂದರು.
ಮುಖಂಡರಾದ ಜಗದೀಶ್ ಕೊಯಿಲ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಅಮೀನ್, ರಿತೇಶ್ ಅಂಚನ್, ಚಲನಚಿತ್ರ ನಟ ಪ್ರಕಾಶ್ ತೂಮಿನಾಡು ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾರಾಯಣಗುರು ಸೇವಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಸಾಲ್ಯಾನ್ ತಾಳಿಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಶಿಕ್ಷಕಿ ವಿಜಯಮ್ಮ ಮತ್ತು ಪುರುಷೋತ್ತಮ ದಂಪತಿಗಳು, ಕನ್ನಡ-ತುಳು ಚಲನಚಿತ್ರ ನಟ ಪ್ರಕಾಶ್ ತೂಮಿನಾಡು, ಚಲನಚಿತ್ರ, ಧಾರವಾಹಿ, ನಾಟಕ ಕಲಾವಿದೆ ಪ್ರಕೃತಿ ಡಿ. ಅಮೀನ್, ಗ್ರಾಮಪಂಚಾಯತ್ ನಿವೃತ್ತ ಕಾರ್ಯದರ್ಶಿ ಸೋಮಶೇಖರ ಕೊತ್ತಲಾಯಿ ದಂಪತಿಗಳು, ರಿತೇಶ್ ಅಂಚನ್ ದುಬೈ, ಸದಾಶಿವ ಅಗರಿ ದಂಪತಿಗಳು, ಉಷಾ ವಿಠಲ ಪೂಜಾರಿ ತೌಡಂಗೆ ದಂಪತಿಗಳನ್ನು ಪೇಟ ತೊಡಿಸಿ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ನಾರಾಯಣ ಗುರು ಸೇವಾ ಸಮಿತಿಯ ಕಾರ್ಯಕ್ರಮಗಳಿಗೆ ನಿರಂತರವಾಗಿ ಸಹಕರಿಸಿದ ಸಮಾಜಭಾಂದವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಶೈಕ್ಷಣಿಕವಾಗಿ ಸಾಧನೆಗೈದ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಅತಿಥಿಗಳು ವಿತರಿಸಿದರು.
ಗುರುಗಳ 171ನೇ ಜಯಂತಿ ಅಂಗವಾಗಿ ಸಮಾಜ ಬಾಂಧವರಿಗೆ ನಡೆಸಲಾಗಿದ್ದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಪ್ರಮುಖರಾದ ಪ್ರಥ್ವಿರಾಜ್ ಆರ್. ಕೆ., ಪ್ರವೀಣ್ ಕುಮಾರ್ ಅಗರಿ, ಪುರುಷೋತ್ತಮ, ಕೆ., ಬಿಎಲ್ ಪಿ ಪದ್ಮನಾಭ ಕೋಟ್ಯಾನ್
ಗಜಾನನ ಕನ್ಸ್ತ್ರ ಕ್ಷನ್ ಮಾಲಕ ಜಗದೀಶ್ ಕುಲಾಲ್ ಪಾಕಜೆ,ಮುತ್ತೂರು ಪಂಚಾಯತ್ ಸದಸ್ಯರಾದ ಸತೀಶ್ ಪೂಜಾರಿ ಬಳ್ಳಾಜೆ, ಶ್ರೀಮತಿ ಮಾಲತಿ, ಶ್ರೀಮತಿ ರುಕ್ಮಿಣಿ, ಶ್ರೀಮತಿ ಶಶಿಕಲಾ,
ನಾರಾಯಣಗುರು ಬಿಲ್ಲವ ಸೇವಾ ಸಮಿತಿಯ ಗೌರವಾಧ್ಯಕ್ಷ ವಿನೋದ್ ಕುಮಾರ್ ಅಂಬೆಲೊಟ್ಟು, ನಾರಾಯಣಗುರು ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಶೇಖರ್ ನೇಲಚ್ಚಿಲ್, ನಾರಾಯಣಗುರು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ ಜಯಂತಿ ಅಟ್ಟೆಪದವು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಕಾರ್ಯದರ್ಶಿ ರಘು ಎಂ. ಅಗರಿ ವಾರ್ಷಿಕ ವರದಿ ಮಂಡಿಸಿದರು.
ಚಂದ್ರಶೇಖರ ತುಂಬೆಮಜಲ್, ಲೋಕೇಶ್ ಚಂದ್ರಮಜಲ್, ದಿವ್ಯಾ ಉದಯಕುಮಾರ್, ವಿಶ್ವನಾಥ ಪಂಜ, ಸುಜಾತ ಯಾದವ ಬಳ್ಳಿ ಸಮ್ಮಾನ ಪತ್ರ ವಾಚಿಸಿದರು. ಶ್ರೀಮತಿ ಚಯನ ಬಹುಮಾನ ವಿಜೇತರ ಪಟ್ಟಿ ಓದಿದರು.
ಮಹಾಬಲ ಸಾಲ್ಯಾನ್ ಸ್ವಾಗತಿಸಿದರು.
ಯಶವಂತ ಅಗರಿ ನಿರೂಪಿಸಿ, ಲೋಕೇಶ್ ಚಂದ್ರಮಜಲ್ ವಂದಿಸಿದರು.
ಮಂಗಳೂರು ಉತ್ತರ ಶಾಸಕ ಡಾ ಭರತ್ ಶೆಟ್ಟಿ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ನಾರಾಯಣಗುರು ಮಹಿಳಾ ಸಮಿತಿ ಮತ್ತು ಬಳ್ಳಾಜೆ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು.
