ಗುರುಪುರ : ಬಿಲ್ಲವರ ಸಮಾಜ ಸೇವಾ ಸಂಘ(ರಿ) ಗುರುಪುರ ಹಾಗೂ ಸ್ಪೂರ್ತಿ ಬಿಲ್ಲವ ಮಹಿಳಾ ಘಟಕದ ಆಶ್ರಯದಲ್ಲಿ ಗುರುಪುರ ಗುರುನಗರದ ಗುರು ಮಂದಿರದಲ್ಲಿ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೧ನೇ ಜನ್ಮದಿನಾಚರಣೆ ಪ್ರಯುಕ್ತ `ಗುರು ಜಯಂತಿ’ ಪೂಜೆ ನಡೆಯಿತು.

ಪೂಜೆಗೆ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಆಗಮಿಸಿದ್ದು, ಪ್ರಸಾದ ಸ್ವೀಕರಿಸಿದರು. ಸಂಘದ ಅಧ್ಯಕ್ಷ ಮಹಾಬಲ ಅಮೀನ್, ಸ್ಫೂರ್ತಿ ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ವಿನೋದಾ ಡಿ. ಅಂಚನ್, ಸಂಘ ಹಾಗೂ ಘಟಕದ ಪದಾಧಿಕಾರಿಗಳು, ಸದಸ್ಯರಗುರುಗಳಅನುಯಾಯಿಗಳು ಉಪಸ್ಥಿತರಿದ್ದರು.

ಬೆಳಿಗ್ಗೆ ಗುರು ಮಂದಿರದಲ್ಲಿ ಭಜನೆ, ಗಣಹೋಮ ನಡೆಯಿತು. ಮಹಾಪೂಜೆಯ ಬಳಿಕ ಮಧ್ಯಾಹ್ನದ ಅನ್ನ ಸಂತರ್ಪಣೆಯಾಯಿತು. ನಂತರ ಕುಸಾಲ್ದ ಗುರಿಕಾರೆ ದಿನೇಶ್ ಕೋಡಪದವು ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರ ಸಮಾಗಮದೊಂದಿಗೆ `ಯಕ್ಷ ತೆಲಿಕೆ’ ಯಕ್ಷ ಹಾಸ್ಯ ವೈಭವ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *