ಬಂಟ್ವಾಳ: ಖಗ್ರಾಸ ಚಂದ್ರ ಗ್ರಹಣದ ಪ್ರಯುಕ್ತ ಭಾನುವಾರ ಬಿ.ಸಿ.ರೋಡಿನಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ಸಹಿತ ವಿವಿಧ ಮಂತ್ರಪಠಣ ನಡೆಯಿತು.


ಶ್ರೀ ಸೂಕ್ತ ,ಪುರುಷ ಸೂಕ್ತ,ದುರ್ಗಾ ಸೂಕ್ತ,ಮನ್ಯು ಸೂಕ್ತ,ಐಕ ಮತ್ಯ ಸೂಕ್ತ,ರುದ್ರ ಸೂಕ್ತ,ಗಣಪತಿ ಸೂಕ್ತ,ಭಾಗ್ಯ ಸೂಕ್ತ,ವಿಷ್ಣುಸೂಕ್ತ,ಸೌರ ಸೂಕ್ತ, ಸ್ವಸ್ತಿ ಸೂಕ್ತ,ಸರಸ್ವತಿ ಸೂಕ್ತ, ನಾರಾಯಣ ಸೂಕ್ತ,ಮಂತ್ರ ಪುಷ್ಪ,ಶಾಂತಿ ಮಂತ್ರ ಪಠಣ, ಗಾಯತ್ರಿ,ಅಷ್ಟಾಕ್ಷರಿ,ಪಂಚಾಕ್ಷರಿಜಪ, ಗಣಪತಿ ಅಥರ್ವಶೀರ್ಷ,ರುದ್ರ ಪಠಣವನ್ನು  ನೆರವೇರಿಸಲಾಯಿತು.


ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಏ.ರವಿಶಂಕರ ಮಯ್ಯ,ಎಂ.ಜಯರಾಮ ಮಯ್ಯ,ಮಿಥುನರಾವ್ ಕನಪಾಡಿ,ಎನ್. ರಾಮಚಂದ್ರಮಯ್ಯ ,ಜಿ.ನಾರಾಯಣ ಭಟ್ ,ಶಾಂತರಾಮರಾವ್ ಅವರು ಧಾರ್ಮಿಕ ವಿಧಿ ವಿದಸಾನದಲ್ಲಿ  ಭಾಗವಹಿಸಿದರು.
ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲೋಕನಾಥ್ ಶೆಟ್ಟಿ ಸಹಿತ ಪ್ರಮುಖರು  ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *