ಬಂಟ್ವಾಳ: ವಾಮದಪದವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ತೋಟಗಾರಿಕಾ ಇಲಾಖೆ, ಬೊಲ್ಪು ಎಫ್ ಪಿಒ ಬಿ. ಸಿ.ರೋಡ್ ಇದರ ಸಹಯೋಗದಲ್ಲಿ ಎರಡು ದಿನಗಳ ಜೇನು ತರಬೇತಿ ಶಿಬಿರವನ್ನು ಸೋಮವಾರ ಚೆನ್ನೈತೋಡಿ ಗ್ರಾ.ಪಂ. ಅಧ್ಯಕ್ಷೆ ವನಿತ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಸಭಾಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.ಬೊಲ್ಪು ಸಂಸ್ಥೆಯ ಅಧ್ಯಕ್ಷ ರಾಜಾ ಬಂಟ್ವಾಳ್, ಗ್ರಾ.ಪಂ. ಉಪಾದ್ಯಕ್ಷೆ ಜಯಂತಿ ಮತ್ತು ಸಹಕಾರಿ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಜೊ ಪ್ರದೀಪ್ ಡಿಸೋಜ ಪ್ರಸ್ತಾವನೆ ನೀಡಿದರು.
ಸಂಪನ್ಮೂಲ ವ್ಯಕ್ತಿ, ರಾಜ್ಯ ಮಟ್ಟದ ಜೇನು ತರಬೇತುದಾರ ರಾಧಾಕೃಷ್ಣ ಕೋಡಿ ಮಾಹಿತಿ ನೀಡಿದರು.
ಬೊಲ್ಪು ನಿರ್ದೇಶಕ ವಿಜಯ್ ರೈ ಸ್ವಾಗತಿಸಿ ಸಂಘದ ಸಿಇಒ ಅಲ್ಬರ್ಟ್ ಡಿಸೋಜ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
