ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಪಿಲಾತಬೆಟ್ಟು ಶಕ್ತಿ ಕೇಂದ್ರ ಅಭ್ಯಾಸ ವರ್ಗವನ್ನು ಬಿಜೆಪಿಯ ಮುಖಂಡರಾದ  ಸಂದೇಶ ಶೆಟ್ಟಿ ಅರೆಬೆಟ್ಟು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಹಿರಿಯ ಕಾರ್ಯಕರ್ತರಾದ ಲಕ್ಷ್ಮಿ ಜೆ ಬಂಗೇರ ಅವರು ಅಧ್ಯಕ್ಷತೆ ವಹಿಸಿದ್ದರು.ಮೊದಲ ಅವಧಿಯಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷರಾದ  ಚೆನ್ನಪ್ಪ ಆರ್ ಕೋಟ್ಯಾನ್ ಮಾಹಿತಿ ನೀಡಿದರು. ಲಕ್ಷ್ಮೀನಾರಾಯಣ ಹೆಗ್ಡೆ ಅಧ್ಯಕ್ಷತೆಯಲ್ಲಿ ವಹಿಸಿದ್ದರು.


ಎರಡನೇ ಅವಧಿಯಲ್ಲಿ ಬಿಜೆಪಿ ಮುಖಂಡರಾದ  ಮೋನಪ್ಪ ದೇವಸ್ಯ ಅವರು ಮಾಹಿತಿ ನೀಡಿದರು,ಯೋಗೀಂದ್ರ ಕುಮಂಗಿಲ ಅವರು ಅಧ್ಯಕ್ಷತೆ ವಹಿಸಿದ್ದರು.


ಮೂರನೇ ಅವಧಿಯಲ್ಲಿ ಬಿಜೆಪಿಯ ರಾಜ್ಯ ವಕ್ತಾರರಾದ ವಿಕಾಸ್ ಪುತ್ತೂರು ಅವರು ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲಕ್ಷ್ಮಿ ಜೆ ಬಂಗೇರ ಇವರ ಅಧ್ಯಕ್ಷತೆ ವಹಿಸಿದ್ದರು.ಬಿಜೆಪಿ ಪ್ರಮುಖರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ಅವರುಸಮಾರೋಪ ಬಾಷಣಗೈದರು.


ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ. ತುಂಗಪ್ಪ ಬಂಗೇರ, ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಕಾರ್ಯದರ್ಶಿ  ಹರ್ಷಿಣಿ ಪುಷ್ಪಾನಂದ,ಅಭ್ಯಾಸ ವರ್ಗ ಸಹಸಂಚಾಲಕರಾದ ವಸಂತಕುಮಾರ್ ಅಣ್ಣಳಿಕೆ,ಶಕ್ತಿ ಕೇಂದ್ರದ ಪ್ರಮುಖರಾದ ಚಂದ್ರಶೇಖರ ಶೆಟ್ಟಿ ಕುಮಂಗಿಲ, ಗ್ರಾಮ ಪಂಚಾಯತ್  ಅಧ್ಯಕ್ಷೆ ಶಾರದಾ ರತ್ನಾಕರ್,ಕಾಂತಪ್ಪ ಕರ್ಕೇರ, ಸರೋಜಾ ಡಿ ಶೆಟ್ಟಿ, ಪುಷ್ಪಾನಂದ, ಬೂತ್ ಸಮಿತಿ ಅಧ್ಯಕ್ಷರಾದ ಜಯಂತ ಕುಮಾರ್, ಸದಾಶಿವ ಪೂಜಾರಿ ಕಾಡಬೆಟ್ಟು, ವಿಜಯ ನಯನಾಡು, ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಶಶೀಂದ್ರ ಶೆಟ್ಟಿ,ಮೋಹನ್ ಗೌಡ, ಕೃಷ್ಣಪ್ಪ ಪೂಜಾರಿ ಹಾಗೂ ಹರೀಶ್ ಶೆಟ್ಟಿ ನೈ ನಾಡ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *