ಬಂಟ್ವಾಳ: ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಭಾ ಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಸಿ.ಎಚ್.ನಾರಾಯಣ ಭಟ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿಹಾಲು ವ್ಯಾಪಾರದಿಂದ 6,78,975.70 ರೂ., ಪಶು ಆಹಾರ ಮಾರಾಟದಿಂದ 40,065 ರೂ. ಲಾಭ ಗಳಿಸಿದ್ದು,ಸಂಘದ ಖರ್ಚುಗಳನ್ನು ಕಳೆದು 2,38,479.03 ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ಸಂಘವು ಕಳೆದ 17 ವರ್ಷಗಳಿಂದ ಆಡಿಟ್ ವರ್ಗೀಕರಣದಲ್ಲಿ ಸತತವಾಗಿ ” ಎ ” ತರಗತಿಯನ್ನು ಹೊಂದಿದೆ ಎಂದ ಅವರು ಸಂಘದಲ್ಲಿ276 ಸದಸ್ಯರಿದ್ದು, 55200-00 ಪಾಲು ಬಂಡವಾಳವಿರುತ್ತದೆ.ಪ್ರಸಕ್ತ ವರ್ಷದಲ್ಲಿ 8 ಮಂದಿ ಹೊಸ ಸದಸ್ಯರು ಸೇರ್ಪಡೆಗೊಂಡಿದ್ದು, ವರ್ಷಾಂತ್ಯಕ್ಕೆ 284 ಸದಸ್ಯರಿಂದ 56,800-00 ಪಾಲು ಬಂಡವಾಳ ಜಮೆಯಾಗಿರುತ್ತದೆ ಎಂದು ಅವರು ಹೇಳಿದರು.
ಹೈನುಗಾರಿಕಾ ರೈತರು ತಮ್ಮ ಹಸುಗಳಿಗೆ ಕಡ್ಡಾಯವಾಗಿ ವಿಮೆಯನ್ನು ಮಾಡಬೇಕು , ಇದರಿಂದ ರೈತರು ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸಬಹುದು ಎಂದರು.ಉಪಾಧ್ಯಕ್ಷ ಸದಾನಂದ ರೈ,ನಿರ್ದೇಶಕರುಗಳಾದ ಕೆ.ನಾರಾಯಣ ಶೆಟ್ಟಿ, ಕೆ.ಬಾಬು ಶೆಟ್ಟಿ, ಸಚ್ಚಿದಾನಂದ ರೈ, ಎಲ್ ಶಿವಶಂಕರ್ ಭಟ್ , ಶಿವರಾಮ ಗೌಡ,ಮಹೇಂದ್ರ ಡಿ.ಪ್ರಫುಲ್ಲ ರೈ, ಲಲಿತಾ ನಾಯ್ಕ ಉಪಸ್ಥಿತರಿದ್ದರು.
ಸುಮಾರು 55 ವರ್ಷಗಳಿಂದ ಸಂಘದ ಸದಸ್ಯರಾಗಿದ್ದು ಹೈನುಗಾರಿಕೆಯಲ್ಲಿ ತೊಡಗಿಸಿರುವ ಸುಬ್ರಹ್ಮಣ್ಯ ಭಟ್ ಕುಳ್ಳಾಜೆ ಹಾಗೂ ಸಂಜೀವ ಶೆಟ್ಟಿ ಕೊಡಾಜೆ, ನಿವೃತ್ತಿ ಹೊಂದಿದ ಹಾಲು ಪರಿವೀಕ್ಷಕ ಮುತ್ತಪ್ಪ ಪೂಜಾರಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಘಕ್ಜೆ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರುಗಳನ್ನುಗೌರವಿಸಲಾಯಿತು.
ಕಾರ್ಯದರ್ಶಿ ನಾಗೇಶ್ ವಾರ್ಷಿಕ ವರದಿ ವಾಚಿಸಿದರು.ನಿರ್ದೇಶಕ ಜನಾರ್ಧನ ಪೆರಾಜೆ ಸ್ವಾಗತಿಸಿ, ಬಾಲಕೃಷ್ಣ ಪೂಜಾರಿ ವಂದಿಸಿದರು.
