ಬಂಟ್ವಾಳ: ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ., ಬಂಟ್ವಾಳ ಇದರ 2024-25 ನೇ ಸಾಲಿನ ಮಹಾಸಭೆಯು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು. 

ಸಂಸ್ಥೆಯ ಅಧ್ಯಕ್ಷರಾದ  ಸುಭಾಶ್ಚಂದ್ರ ಜೈನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ 77.59 ಲಕ್ಷ ರೂ.ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 13 ಡಿವಿಡಂಟ್  ಘೋಷಿಸಿದರು.ಸಂಸ್ಥೆಯು ಮುಂದಿನ ದಿನಗಳಲ್ಲಿ ಅರ್ಥಿಕ ವ್ಯವಹಾರವನ್ನು ಇನ್ನಷ್ಟು ಬೆಳೆಸುವ  ಹಾಗೂ ಗ್ರಾಹಕರಿಗೆ ಪರಿಪೂರ್ಣ ಬ್ಯಾಂಕಿಂಗ್ ಸೌಲಭ್ಯವನ್ನು ಕೊಡುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನವನ್ನು  ಆಳವಡಿಸಿ ಕಾರ್ಯಪ್ರವೃತ್ತವಾಗಿದ್ದೇವೆ ಎಂದು ತಿಳಿಸಿದರು.

ಸಣ್ಣ ಪುಟ್ಟ ವ್ಯಾಪಾರ ಮಾಡುವ ವರ್ತಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಗರದ ಕೇಂದ್ರ ಭಾಗದಲ್ಲಿ ವಾರದ ಸಂತೆ ಎಂಬ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ನಿರ್ದೇಶಕರಾದ  ವಿಜಯಕುಮಾರಿ ಇಂದ್ರ ರವರು 2024-25 ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. 2025-26 ಅಂದಾಜು ಬಜೆಟ್‌ಗಳಿಗೆ ಮುಖ್ಯಕಾರ್ಯ ನಿರ್ವಹಣಾಧಿಕಾರಿಯಾದ ಅಜಿತ್ ಕುಮಾರ್ ಜೈನ್ ರವರು ಮಂಡಿಸಿ ಮಂಜೂರಾತಿಯನ್ನು ಪಡೆದರು. 

ಸಂಸ್ಥೆಯ ಸದಸ್ಯ, ಉತ್ತಮ ಗ್ರಾಹಕರಾಗಿ ವೃತ್ತಿ ಜೀವನದಲ್ಲಿ ಗುರುತಿಸಿಕೊಂಡಿರುವ ಸೇಸಪ್ಪ ಸಪಲಿಗ ರವರನ್ನು  ಸನ್ಮಾನಿಸಲಾಯಿತು. 

ನಿರ್ದೇಶಕರಾದ ಸ್ವಪ್ನಾ ರಾಜರತ್ನ ಸನ್ಮಾನ ಪತ್ರ ವಾಚಿಸಿದರು. 

ಸದಸ್ಯರ ಆರೋಗ್ಯನಿಧಿಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ಸಂಸ್ಥೆಯ ಸದಸ್ಯರಿಗೆ ಸಹಾಯ ಧನ  ಹಾಗೂ ಸುಮಾರು 53 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. 

ವಿವಿಧ ವಿಭಾಗಗಳ  ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿಯನ್ನು  ಸತವಪ್ನ ಚಂದ್ರಪ್ರಭ,ನಿಶಾ ದಿನಕರ್,ಶರ್ಮಿಳಾ ಎಲ್ ಕುಮಾರ್,ಕು.ಸುಪ್ರೀತಾ ಡಿಕುನ್ಹಾ,ಜಯಲಕ್ಷ್ಮೀ ನಾಯಕ್ ವಾಚಿಸಿದರು‌

ಸಂಸ್ಥೆಯ ಶಾಖೆಗಳಲ್ಲಿ ಅರ್ಥಿಕ ಚಟುವಟಕೆಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಸಮಗ್ರ ನಿರ್ವಹಣೆ ಮಾಡಿದ ಶಾಖೆಗಳಾದ ಬಂಟ್ವಾಳ, ವಾಮದಪದವು ಹಾಗೂ ರಾಯಿ ಶಾಖೆಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದ ಪ್ರಶಸ್ತಿಯನ್ನು ವಿತರಿಸಲಾಯಿತು.ನಿರ್ದೇಶಕರಾದ  ನಾರಾಯಣ ಸಿ. ಪೆರ್ನೆ ಯವರು ಬಹುಮಾನದ ಪಟ್ಟಿ ಘೋಷಿಸಿದರು.

 ಮೋಹನ್ ಜಿ. ಮೂಲ್ಯ ರವರು ವಾರ್ಷಿಕ ಮಹಾಸಭೆಯ ನೋಟೀಸನ್ನು ಓದಿ ದಾಖಲಿಸಿದರು. ನಿರ್ದೇಶಕರಾದ  ಮೈಕಲ್ ಡಿ’ಕೋಸ್ತಾರವರು ಸ್ವಾಗತಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ  ಮಂಜುನಾಥ ರೈ, ನಿರ್ದೇಶಕರುಗಳಾದ  ರಾಜೇಶ್ ಬಿ.,  ಗಜೇಂದ್ರ ಪ್ರಭು,  ಹೇಮಂತ್ ಕುಮಾರ್ ಜೈನ್,  ರವೀಂದ್ರ, ಡಾ. ಸುದೀಪ್ ಕುಮಾರ್. ಲೋಕೇಶ್ ಸುವರ್ಣ,  ಬಟ್ಟಪ್ಪ ಶೆಟ್ಟಿ , ಜಯರಾಜ್  ಉಪಸ್ಥಿತರಿದ್ದರು. ನಿರ್ದೇಶಕರಾದ ದಿವಾಕರದಾಸ್ ವಂದಿಸಿದರು.ಸುಧಾಕರ ಸಾಲ್ಯಾನ್ ರವರು ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *