ಬಂಟ್ವಾಳ: ಕರ್ನಾಟಕ ಸಾವಯವ ಕೃಷಿ ಯೋಜನೆ (ರಿ.)ಬಂಟ್ವಾಳ ಇದರ ವತಿಯಿಂದ ಆಟಿದ ಕೂಟಹಾಗೂ ರೈತ ಸಾಧಕರಿಗೆ ಸನ್ಮಾನ, ಅತ್ಯುತ್ತಮ ಸಾವಯವ ಕೃಷಿ ಪ್ರೋತ್ಸಾಹ  ರೈತ ಪ್ರಶಸ್ತಿ – 2025 ಪ್ರದಾನ ಕಾರ್ಯಕ್ರಮ ಬಿ.ಸಿ.ರೋಡಿನ‌ಸ್ಪರ್ಶಾ ಕಲಾ ಮಂದಿರದಲ್ಲಿ ಭಾನುವಾರ ನಡೆಯಿತು.


ಮಾಜಿ ಸಚಿವ  ಬಿ. ರಮಾನಾಥ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಕರ್ನಾಟಕ ಸಾವಯವ ಕೃಷಿ ಯೋಜನೆ (ರಿ.)ಆಡಳಿತ ನಿರ್ದೇಶಕರಾದ ಮೋಹನ್ ಗೌಡ ಕಲ್ಮಂಜ ಸಭಾಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದರು.
ಬಂಟ್ವಾಳ ಪುರಸಭಾಧ್ಯಕ್ಷ ವಾಸುಪೂಜಾರಿ‌ಲೊರೆಟ್ಟೋ,ಸಂಚಯಗಿರಿ ತುಳು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೋ.ತುಕರಾಂ ಪೂಜಾರಿ,ಶ್ರೀ ತುಕಾರಾಂ ಪೂಜಾರಿ, ಬಂಟ್ವಾಳ ಕ್ಷೇತ್ರ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ
ಸುಧಾಕರ್ ಶೆಣೈ ಖಂಡಿಗ, ಮಮತಾ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್ ,ಮಾಜಿ ಜಿ.ಪಂ.ಸದಸ್ಯ ಪದ್ಮಶೇಖರ ಜೈನ್, ಸಾವಯುವ ಕೃಷಿ ಯೋಜನೆಯ ಆಡಳಿತ ನಿರ್ದೇಶಕಿ ಅಶ್ವಿನಿ ಮೋಹನ್ ಗೌಡ,ಕಾಸರಗೋಡುಜಿಲ್ಲಾ ಹಿರಿಯ ಅಧಿಕಾರಿಣಿ ಪೂರ್ಣಿಮ ಅಡೂರು ವೇದಿಕೆಯಲ್ಲಿದ್ದರು.


ಇದೇ ವೇಳೆ  ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಕಾಲದಲ್ಲಿ ಪಶ್ಚಿಮ ವಾಹಿನಿ ಯೋಜನೆ ಸಾಹಕಾರಗೊಳಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ ಹಿನ್ನಲೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರನ್ನು ಸನ್ಮಾನಿಸಲಾಯಿತು.

ಅದೇರೀತಿ ಸುಮಾರು 47 ಮಂದಿ ಸಾಧಕ ರೈತರನ್ನು ಅಭಿನಂದಿಸಲಾಯಿತಲ್ಲದೆ ಅತ್ಯುತ್ತಮ ಸಾವಯವ ಕೃಷಿ ಪ್ರೋತ್ಸಾಹ  ರೈತ ಪ್ರಶಸ್ತಿ – 2025 ನ್ನು ಪ್ರದಾನ ಮಾಡಲಾಯಿತು.
ನಿವೃತ್ತ ಯೋಧ ಅಮ್ಮಣ್ಣರೈ ದೇರ್ಲ ಹಾಗೂ ದುಗ್ಗಪ್ಪಗೌಡ ಅವರು ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು.
ಭಾರತಿ ರೈ, ಅರಿಯಡ್ಕ‌ಸ್ವಾಗತಿಸಿದರು. ಈಶ್ವರ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

By suddi9

Leave a Reply

Your email address will not be published. Required fields are marked *