ಮುಂಬಯಿ : ನೂಲ ಹುಣ್ಣಿಮೆ ಶ್ರಾವಣದ ದಿನ ಆಚರಿಸುವ ರತ್ನತ್ರಯ ಸೂತ್ರ ಧರಿಸುವ ಹಬ್ಬವಾದ ಇಂದು ಶನಿವಾರ ಮೂಡುಬಿದಿರೆ ಜೈನ ಕಾಶಿಯ೧೮ ಬಸದಿಗಳಲ್ಲಿ ವಿಶೇಷ ಪೂಜೆ ಹವನ ಮೂಲಕ ಶ್ರಾವಕರು ಆಚಾರ್ಯ ಗುಲಾಬ್ ಭೂಷಣ ಮುನಿರಾಜ್ ಇವರ ದಿವ್ಯೋಪಸ್ಥಿತಿಯಲ್ಲಿ ರತ್ನತ್ರಯ ಸೂತ್ರ ಧರಿಸಿದರು.

ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ.ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ತಮ್ಮ ಅನುಗ್ರಹ ನುಡಿಯಲ್ಲಿ ಧರ್ಮ ನಿರತರದವರಿಗೆ ರಕ್ಷಣೆ ನೀಡುವ ಭಾವನೆ ಮಾಡುವ ದಿನ ಎಂದು ಶ್ರೀಪಾದರು ಆಶೀರ್ವಾದದಲ್ಲಿ ತಿಳಿಸಿದರು.

ಶ್ರೀ ಮಠದಲ್ಲಿ ಹವನದ ಬಳಿಕ ಜನಿವಾರ ಧಾರಣೆ ನಡೆದಿದ್ದು, ಅಪರಾಹ್ನ ಶ್ರೀ ಮಠ ಬಳಿ ಶಾಂತಿ ಭವನದಲ್ಲಿ ಶಾಂತಿ ಚಕ್ರ ಆರಾಧನೆಯ 16ನೇ ಆರಾಧನೆ ಸಮಾಪನ ಗೊಂಡಿತು. ಆಚಾರ್ಯರ ಭಟ್ಟಾರಕರ ಪಾದಪೂಜೆ ಆರತಿ ಮಾಡಿ ಭಕ್ತವೃಂದದ ಧರ್ಮ ಲಾಭ ಗಳಿಸಿದರು.

ಮಾಜಿ ಸಚಿವ ಕೆ.ಅಭಯ ಚಂದ್ರ ಜೈನ್, ತಿಲಕ್ ಪ್ರಸಾದ್, ದರ್ಶನ್ ಶೆಟ್ಟಿ, ಸಂಜಯಂತ ಕುಮಾರ್, ಸುದೇಶ್ ಬೆಟ್ಕೇರಿ, ಶ್ವೇತಾ ಜೈನ್, ಕೆ.ಸೂರಜ್ ಮೊದಲಾದವರು ಉಪಸ್ಥಿತರಿದ್ದರು..
