ಬಂಟ್ವಾಳ: ಪ್ರಸ್ತುತ ವರ್ಷ ಅವಧಿಗೆ ಮುನ್ನವೇ ಮತ್ತು ನಿರಂತರವಾಗಿ ಸುರಿದಿರುವ  ಮಳೆಯಿಂದಾಗಿ ಅಡಿಕೆ ಬೆಳೆಗೆ ವ್ಯಾಪಕವಾದ ಕೊಳೆರೋಗ ಭಾದೆಯಿಂದ ನಷ್ಟಕೀಡಾದ ಅಡಿಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು ಇಲ್ಲವೇ ರೈತರು ಪಡಿದಿರುವ ಬೆಳೆಸಾಲವನ್ನು ಮನ್ನಾ ಮಾಡಬೇಕು ಎಂದು  ಸಿದ್ದಕಟ್ಟೆ ಪ್ರಾ.ಕೃ.ಪ.ಸ.ಸಂಘದ ಅಧಗಯಕ್ಷ ಪ್ರಭಾಕರಪ್ರಭು ಅವರು ರಾಜ್ಯದ ತೋಟಗಾರಿಕಾ ಸಚಿವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ.


ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಹುತೇಕ ಆರ್ಥಿಕ ವ್ಯವಹಾರಗಳು ಅಡಿಕೆ ಬೆಳೆಗಾರರನ್ನು ಅವಲಂಬಿತಗೊಂಡಿದ್ದು ಪ್ರಸ್ತುತ ವರ್ಷ ಅವಧಿಗೆ ಮುನ್ನವೇ ಮತ್ತು ನಿರಂತರವಾಗಿ ಬಂದಿರುವ ಭಾರೀ ಮಳೆಯ ಪರಿಣಾಮವಾಗಿ ಅಡಿಕೆ ಬೆಳೆಗೆ ವ್ಯಾಪಕವಾಗಿ ಕೊಳೆರೋಗ ಭಾದಿಸಿದ ಪರಿಣಾಮ ಶೇ.50 ರಷ್ಟು ಹಸಿ ಅಡಿಕೆಗಳು  ಉದುರಿ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.


ಇದು ಅಡಕೆ ಬೆಳೆಗಾರ ರೈತರ ಮುಂದಿನ ವರ್ಷದ ಜೀವನಕ್ಕೆ ಭಾರೀ ಪ್ರಮಾಣದಲ್ಲಿ ಹೊಡೆತ ಬೀಳಲಿದೆ,ವಿಪರೀತ ಮಳೆಯಿಂದಾಗಿ ಕೊಳೆರೋಗ ತಡೆಯುವ ನಿಟ್ಟಿನಲ್ಲಿ ರೈತರಿಗೆ ಔಷಧ ಸಿಂಪಡಿಸಲು  ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ಅಡಿಕೆ ಮರಗಳಿಗೂ ರೋಗ ತಟ್ಟಿದ್ದು,ಅಡಕೆ ಮರಗಳು ಕ್ಷೀಣಿಸತೊಡಗಿವೆ.ಒಟ್ಟಾರೆಯಾಗಿ  ಕರಾವಳಿ ಜಿಲ್ಲೆಯಲ್ಲಿ ಅಡಿಕೆ ಬೆಳೆಯುವ ರೈತರು ಕಂಗಲಾಗಿದ್ದಾರೆ ಎಂದು ಪ್ರಭು ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಹಿನ್ನಲೆಯಲ್ಲಿ ಪ್ರತಿ ಒಂದು ಎಕ್ರೆ ಅಡಿಕೆ ಬೆಳೆಗೆ  75 ಸಾ.ರೂ.ನಂತೆ ಪರಿಹಾರ ಘೋಷಣೆ ಮಾಡಬೇಕು ಅಥವಾ ರೈತರು ಪಡಿದಿರುವ ಬೆಳೆಸಾಲವನ್ನು ಮನ್ನಾ ಮಾಡಬೇಕು ಎಂದು ಅವರು‌ಮನವಿಯಲ್ಲಿ‌ಒತ್ತಾಯಿಸಿದ್ದಾರೆ. ಮನವಿಯ ಪ್ರತಿಯನ್ನು ಸರಕಾರದ ತೋಟಗಾರಿಕಾ ಇಲಾಖೆಯ  ಪ್ರಧಾನ ಕಾರ್ಯದರ್ಶಿಗಳಿಗೂ ರವಾನಿಸಿದ್ದಾರೆ

By suddi9

Leave a Reply

Your email address will not be published. Required fields are marked *