ಬಂಟ್ವಾಳ: ತುಳುನಾಡಿನ ಆಚರಣೆಗಳು  ತನ್ನದೇ ಆದ ವೈಶಿಷ್ಟ್ಯಗಳಿಂದ ವಿಶ್ವಕ್ಕೆ ಮಾದರಿಯಾಗಿದೆ, ನಶಿಸುವ ಹಂತದಲ್ಲಿರುವ  ಇಲ್ಲಿನ ಸಂಸ್ಕೃತಿ, ಆಹಾರ ಪದ್ಧತಿಯನ್ನು ಉಳಿಸುವ ದೃಷ್ಟಿಯಿಂದ ಯುವ ಜನಾಂಗಕ್ಕೆ ತಿಳಿ ಹೇಳಲು ಆಟಿದ ಲೇಸು ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಡಿ ಹೇಳಿದರು.


ಭಾನುವಾರ ಕಾಡಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ವಗ್ಗ ವಲಯದ ಕಾಡಬೆಟ್ಟು ಒಕ್ಕೂಟ ಮತ್ತು ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ಘಟಕ ಕಾಡಬೆಟ್ಟು ವಗ್ಗ ವತಿಯಿಂದ ನಡೆದ “ಆಟಿದ ಲೇಸು” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಉದ್ಯಮಿ ಶೃತಾಂಜನ್ ಜೈನ್ ಆಲಂಪುರಿ ಗುತ್ತು  ವಹಿಸಿದ್ದರು.ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.)ವಗ್ಗ ದ ಅಧ್ಯಕ್ಷರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ರವರು ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಮಾಧವ್ ಕುಲಾಲರ ಜೊತೆ ಚೆನ್ನೆಮನೆ ಆಟ ಆಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ದೂರ ದೃಷ್ಟಿಯ ಗ್ರಾಮಭಿವೃದ್ಧಿ  ಯೋಜನೆಗಳು ಬಡವರ ಪಾಲಿನ ಆಶಾಕಿರಣವಾಗಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಮುಖ್ಯ ವಾಹಿನಿಗೆ ತರಲು ಕಾರಣವಾಗಿದೆ ಎಂದರು.


ಈ ಸಂದರ್ಭ ತುಳುನಾಡಿನ ಆಟಿ ತಿಂಗಳ ಸಾಂಪ್ರದಾಯಕ ತಿಂಡಿ ತಿನಸು ಹಾಗೂ  ಹಳೇ ಕಾಲದ  ಸಾಮಗ್ರಿಗಳ ಪ್ರದರ್ಶನವಿತ್ತು.ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಮಹಾಬಲ ಕುಲಾಲ್, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ, ಉದ್ಯಮಿ ಸುಜಿತ್ ಕುಮಾರ್ ಜೈನ್ ಪಿಲಿಂಗಾಲು, ಶ್ರೀ ಕ್ಷೇತ್ರ ಕಾರಿಂಜದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ತಾಲೂಕು ಜನಜಾಗತಿ ವೇದಿಕೆಯ ಸದಸ್ಯ ಸದಾನಂದ ನಾವುರ, ತಾಲೂಕು ಕೃಷಿ ಮೇಲ್ವಿಚಾರಕ ಭಾಸ್ಕರ್,ಯೋಜನೆಯ ವಗ್ಗ ವಲಯದ ಅಧ್ಯಕ್ಷ ಉಮೇಶ್, ಐಸಿರಿ ಎಲೆಕ್ಟ್ರಾನಿಕ್ಸ್ ಮಾಲಕ ನಾಗೇಶ್ ಮಧ್ವ, ತಾಲೂಕು ಎಂಇಎಸ್ ಯೋಜನಾಧಿಕಾರಿ ಪ್ರೇಮನಾಥ್,ಶೌರ್ಯ ವಿಪತ್ತು ಘಟಕದ ಬಂಟ್ವಾಳ ತಾಲೂಕು  ಕ್ಯಾಪ್ಟನ್ ಪ್ರಕಾಶ್, ಕಾಡಬೆಟ್ಟು ಸರಕಾರಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯ ಫಿಲಿಂಗಾಲು, ಶಾಲಾ ಜ್ಞಾನದೀಪ ಶಿಕ್ಷಕಿ ಹರಿಣಾಕ್ಷಿ, ವಗ್ಗ ವಲಯ ಮೇಲ್ವಿಚಾರಕಿ ಸವಿತಾ, ಕಾಡಬೆಟ್ಟು ಶೌರ್ಯ ವಿಪತ್ತು ಘಟಕದ ಪ್ರತಿನಿಧಿ ಪ್ರವೀಣ್, ಮೊದಲಾದವರು ಉಪಸ್ಥಿತರಿದ್ದರು.


ದ್ರುವಿ ಪಿ ಕುಂದರ್ ಪ್ರಾರ್ಥಿಸಿ, ವಿ ಎಲ್ ಇ ಲೀಲಾವತಿ ಸ್ವಾಗತಿಸಿದರು, ಶೌರ್ಯ ಘಟಕ ಸಂಯೋಜಕೀ ರೇಖಾ.ಪಿ ವಂದಿಸಿದರು. ನಿತಿನ್ ಮಧ್ವ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಆಟಿ ತಿಂಗಳ ವಿಶೇಷ ಖಾದ್ಯಗಳೊಂದಿಗೆ ಸಾಮೂಹಿಕ ಭೋಜನ ಮಾಡಲಾಯಿತು. ಭಕ್ತಿಗೀತೆ, ಗಾಯನ ಕಾರ್ಯಕ್ರಮವು ನಡೆಯಿತು. 

By suddi9

Leave a Reply

Your email address will not be published. Required fields are marked *