ಬಂಟ್ವಾಳ: ಕಲ್ಲಡ್ಕ  ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. 

ಶ್ರೀರಾಮ ಪ್ರೌಢಶಾಲೆ ನಿವೃತ್ತಿ ಅಧ್ಯಾಪಕರಾದ ಜಯಾನಂದ ಪೆರಾಜೆ,ಮೈಸೂರು ವಿವೇಕ ವಂಶಿ ಫೌಂಡೇಶನ್ ಸಂಯೋಜಕರಾದ  ಪ್ರಭಂಜನ್  ಅವರು “ವಿದ್ಯಾರ್ಥಿಗಳಿಗಾಗಿ ಪುಸ್ತಕ” ಎಂಬ ಪುಸ್ತಕದ ಕುರಿತು ಮಾಹಿತಿಯನ್ನು ನೀಡಿದರು. 

 ನಲ್ಕೆಮಾರ್ ಶಾಲೆಯ ಶಿಕ್ಷಕಿಯಾದ ರೇಖಾ ರಾವ್, ಪ್ರೌಢಶಾಲೆಯ ಮುಖ್ಯ ಗುರುಗಳಾದ ಗೋಪಾಲ್  ಉಪಸ್ಥಿತರಿದ್ದರು.

 ಶ್ರೀರಾಮ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಜಿನ್ನಪ್ಪ ಶ್ರೀಮಾನ್ ಅವರು ಕಾರ್ಗಿಲ್ ವಿಜಯ ದಿವಸದ ಮಹತ್ವವನ್ನು  ತಿಳಿಸಿದರು.

By suddi9

Leave a Reply

Your email address will not be published. Required fields are marked *