ಬಂಟ್ವಾಳ:ಕೃಷ್ಣಮಾತೃ ಬಳಗ ಭಂಡಾರಿಬೆಟ್ಟು ಇದರ ಆಶ್ರಯದಲ್ಲಿ2 ನೇವರ್ಷದ “ಆಟಿದಲೇಸ್‌  “ಕಾರ್ಯಕ್ರಮನಡೆಯಿತು.

ಅಂಗನವಾಡಿ ಶಿಕ್ಷಕಿ ಯಶೋಧ ಜೆ.ಬಂಗೇರಾ ಚೆನ್ನಮಣೆ ಆಡಿ ಕಾರ್ಯಕ್ರಮ ಉದ್ಗಾಟಿಸಿ ಆಟಿ ತಿಂಗಳ ಮಹತ್ವವನ್ನು ತಿಳಿಸಿದರು‌.ತುಳಸಿ ಆರ್‌ .ಅವರು ಅಧ್ಯಕ್ಷತೆ ವಹಿಸಿದ್ದರು.

ರೋಟರಿ ಟೌನ್ ನ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್,ಭಂಡಾರಿಬೆಟ್ಟು ಶ್ರೀಕೃಷ್ಣ ಮಂದಿರ ಸೇವಾ ಟ್ರಸ್ಟ್ ಅಧ್ಯಕ್ಷ ನಾರಾಯಣ ಮೂಲ್ಯ,ಮೊಸರುಕುಡಿಕೆ ಸಮಿತಿ ಅಧ್ಯಕ್ಷ ದಯಾನಂದಗೌಡ, ಪುರಸಭಾ ಸದಸ್ಯ ಹರಿಪ್ರಸಾದ್‌ ಭಂಡಾರಿಬೆಟ್ಟು ಉಪಸ್ಥಿತರಿದ್ದರು.

ಆಷಾಡಮಾಸದ ವಿಶೇಷತಿಂಡಿತಿನಿಸುಗಳನ್ನು ಸ್ಥಳೀಯರು ತಯಾರಿಸಿ ತಮನದಿದ್ದು, ಎಲ್ಲರು ಸವಿದರು.ಜಾನಕಿರಾಜೇಶ್‌ಸ್ವಾಗತಿಸಿದರು. ಅನುಪಮಾ ದೀಪಕ್ ಕಾರ್ಯಕ್ರಮ ನಿರೂಪಿಸಿದರು. ನಳಿನಿರಾಜೇಶ್‌ ವಂದಿಸಿದರು.

By suddi9

Leave a Reply

Your email address will not be published. Required fields are marked *