ಬಂಟ್ವಾಳ :ಧ್ವನಿ ಬೆಳಕು ಸಂಯೋಜಕ ಒಕ್ಕೂಟ (ರಿ.) ಬಂಟ್ವಾಳ ತಾಲೂಕು ಇದರ 9ನೇ ವಾರ್ಷಿಕ ಮಹಾಸಭೆಯು ಬಿ ಸಿ ರೋಡ್ ಲಯನ್ಸ್ ಕ್ಲಬ್ ನಲ್ಲಿ  ನಡೆಯಿತು.ಒಕ್ಕೂಟದ ಬಂಟ್ವಾಳ ತಾಲೂಕು  ಅಧ್ಯಕ್ಷ ಧನ್ ರಾಜ್ ಶೆಟ್ಟಿ ಫರಂಗಿಪೇಟೆ ಇವರ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಒಕ್ಕೂಟದ ಹಿರಿಯ ಸದಸ್ಯರಿಗೆ ಸನ್ಮಾನ ಮತ್ತು ವೀಕಲ ಚೇತನಾ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಎಲ್ಲಾ ಸದಸ್ಯರಿಗೂ ಅರೋಗ್ಯ ವಿಮೆ  ಹಾಗೂ ಕಾರ್ಮಿಕರಿಗೂ ವಿಮೆಯನ್ನು ಮಾಡಲಾಯಿತು. ಒಕ್ಕೂಟದ ಸದಸ್ಯರಿಗೆ ಒಳಾಂಗಣ ಕ್ರೀಡೆ ನಡೆಯಿತು.
ಧ್ವನಿವರ್ದಕ ಬಳಸುವ ಅವಧಿಯನ್ನು ಕಡ್ಡಾಯವಾಗಿ ರಾತ್ರಿ 10.00 ಗಂಟೆ ಸೀಮಿತಗೊಳಿಸಲು  ಸಭೆಯಲ್ಲಿ ನಿರ್ಣಯಿಸಲಾಯಿತು.
  ಒಕ್ಕೂಟದ ಕಾನೂನು ಸಲಹೆಗಾರರಾದ ನ್ಯಾಯವಾದಿ ಜಯರಾಮ್ ರೈ, ಧ್ವನಿವರ್ದಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘದ ಕಾರ್ಯದರ್ಶಿ ಮಹೇಶ್ ಬೋಳೂರು, ಕೋಶಾಧಿಕಾರಿ ಬೆನ್ಹಟ್ ಡಿ. ಸಿಲ್ವ, ಬಂಟ್ವಾಳ ತಾಲೂಕು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ, ಒಕ್ಕೂಟದ ಬಂಟ್ವಾಳ ತಾಲೂಕು ಘಟಕದ ಸ್ಥಾಪಕಾಧ್ಯಕ್ಷರಾದ ರವಿವರ್ಮ ವಿಟ್ಲ, ಕಾರ್ಯದರ್ಶಿ ಸಂತೋಷ್ ಸುವರ್ಣ ಕುರಿಯಾಳ, ಕೋಶಾಧಿಕಾರಿ ಪ್ರಶಾಂತ್ ಕುಡಂಡ್ಕ ಉಪಸ್ಥಿತರಿದ್ದರು.

ಧನಂಜಯ ಶೆಟ್ಟಿ ಸರಪಾಡಿ ಸ್ವಾಗತಿಸಿದರು, ಲೋಹಿತ್ ಬ್ರಹ್ಮರಕೂಟ್ಲು ವಂದಿಸಿದರು. ಇಸ್ಮಾಯಿಲ್ ಬನಾರಿ ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *