ಬಂಟ್ವಾಳ:ಇಲ್ಲಿನ ಅಮ್ಟಾಡಿ, ಕುರಿಯಾಳ ಮತ್ತು ಪಂಜಿಕಲ್ಲು ಮೂರು ಗ್ರಾಮ ವ್ಯಾಪ್ತಿಯ ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಮುಷ್ಠಿ ಕಾಣಿಕೆ ಸಮರ್ಪಣೆ ‘ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆ ಇವರು ಮಾತನಾಡಿ, ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ 3 ಕೋಟಿ ರೂ.ವೆಚ್ಚದಲ್ಲಿ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಲು ನಿರ್ಧರಿಸಲಾಗಿದ್ದು,ಗ್ರಾಮಸ್ಥರು ಮತ್ತು ಎಲ್ಲಾ ಭಕ್ತರ ಸಹಕಾರದ ಅಗತ್ಯವಿದೆ ಎಂದರು.
ಇದೇ ವೇಳೆ ತಂತ್ರಿ ಉದಯ ಪಾಂಗಣ್ಣಾಯ ಮಾರ್ಗದರ್ಶನ ದಲ್ಲಿ ಅರ್ಚಕ ಶ್ರೀಕೃಷ್ಣ ಅರಳಿತ್ತಾಯ ಅವರ ನೇತೃತ್ವದಲ್ಲಿ ಏಕಾದಶ ರುದ್ರಾಭಿಷೇಕ, ಗಣಪತಿ ಹವನ ನೆರವೇರಿತು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕರುಣೇಂದ್ರ ಪೂಜಾರಿ, ಮಲ್ಲಿಕಾ ವಿ. ಶೆಟ್ಟಿ, ರಾಮಚಂದ್ರ ಸುವರ್ಣ, ಕೇಶವ ಕುಕ್ಕುರಿ, ಹರೀಶ್ ಪೆದಮಲೆ, ನಳಿನಿ ಜೆ. ಕೋಟ್ಯಾನ್, ಯುವಕ ಸಂಘದ ಅಧ್ಯಕ್ಷ ಹರೀಶ ಪೂಜಾರಿ ಮತ್ತಿತರರಿದ್ದರು
