ಬಂಟ್ವಾಳ : ಯಾವುದೇ ಕಲಿಕೆಗೆ ವಯಸ್ಸಿನ ಅಡ್ಡಿಇಲ್ಲ. ಯಾವ ವಯಸ್ಸಿನವರು ಕೂಡಾ ಯಾವುದೇ ತರಬೇತಿಯನ್ನು ಪಡೆಯಬಹುದು. ಚಿತ್ರಕಲೆಯೂ ಅಷ್ಟೇ, ಯಾವುದೇ ವಯಸ್ಸಿನವರು ತಮ್ಮ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಚಿತ್ರದ ಮುಖೇನ ವ್ಯಕ್ತ ಪಡಿಸಬಹುದು. ಹೆಚ್ಚು ಸಮಯ ಚಿತ್ರಕಲೆಯಲ್ಲಿ ತಲ್ಲೀನರಾದರೆ ಅವರಿಂದ ಮೂಡಿ ಬರಲಿರುವ ಚಿತ್ರವೂ ಅದ್ಭುತವಾಗಿರುತ್ತದೆ ಎಂದು ನಿವೃತ್ತ ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಡಿ.ಆರ್. ತಿಳಿಸಿದರು.


ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ  ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ರಿ. ಪೊಸಳ್ಳಿ ಇದರ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ನಡೆದ ಚೈತನ್ಯ ೪.೦ ನಿರಂತರ ಶಿಕ್ಷಣದಲ್ಲಿ ಚಿತ್ರಕಲೆ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದಳಪತಿ ಜಯಂತ ಕುಲಾಲ್ ಅಗ್ರಬೈಲು ಮಾತನಾಡಿ ಕಳೆದ ಮೂರು ವರ್ಷಗಳಿಂದ ಕುಲಾಲ ಸೇವಾದಳದಿಂದ ವಿವಿಧ ತರಬೇತಿಯನ್ನು ಉಚಿತವಾಗಿ ನೀಡುತ್ತಾ ಬಂದಿದೆ.ಮುಂದಿನ ದಿನಗಳಲ್ಲು ಇಂತಹ ತರಬೇತಿಯನ್ನು ಆಯೋಜಿಸಲಾಗುತ್ತಿದ್ದು,ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಗಣೇಶ್ ಕುಲಾಲ್ ಬೆದ್ರಗುಡ್ಡೆ, ದೇವದಾಸ ಅಗ್ರಬೈಲು, ತಾರನಾಥ ಮೊಡಂಕಾಪು, ರಾಘವೇಂದ್ರ ಕಾಮಾಜೆ, ಪ್ರೇಮನಾಥ ನೇರಂಬೋಳು ಸೇವಾದಳದ ಕಾರ್ಯದರ್ಶಿ ರಾಜೇಶ್ ಭಂಡಾರಿಬೆಟ್ಟು, ಸೇವಾದಳದ ಸದಸ್ಯರುಗಳಾದ ಪುರುಷೋತ್ತಮ ಸೌತೆಬಳ್ಳಿ, ಕಿಶೋರ್ ಕೈಕುಂಜೆ, ಚಿರಾಗ್ ಕಾಮಾಜೆ, ಬಿಪಿನ್ ಕರಿಂಗಾಣ, ಶೇಖರ ಮಣಿಹಳ್ಳ ಸಹಕರಿಸಿದರು. 

By suddi9

Leave a Reply

Your email address will not be published. Required fields are marked *