ಬಂಟ್ವಾಳ :ಅತೀ ಶೀಘ್ರವಾಗಿ ಬಂಟ್ವಾಳ ನ್ಯಾಯಾಲಯದಲ್ಲು ಬೃಹತ್ ಲೋಕ ಅದಾಲತ್ ಆಯೋಜಿಸುವ ಚಿಂತನೆ ಇದ್ದು,ಹೆಚ್ಚು ಪ್ರಕರಣ ಇತ್ಯರ್ಥವಾಗುವ ನಿಟ್ಟಿನಲ್ಲಿ ವಕೀಲರುಗಳ ಸಹಕಾರದ ಅಗತ್ಯವಿದೆ ಎಂದು ಬಂಟ್ವಾಳದ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಎಂ.ಪಿ.ಹೇಳಿದ್ದಾರೆ.

ಬಂಟ್ವಾಳ ವಕೀಲರ ಸಂಘದ ಕಚೇರಿಯಲ್ಲಿ ಗುರುವಾರ ಬಂಟ್ವಾಳ ವಕೀಲರ ಸಂಘ (ರಿ )ದ 2025-2027 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಮೊದಲ ಅವಧಿಯಲ್ಲಿ ಅಧ್ಯಕ್ಷ ರಿಚರ್ಡ್ ಕೋಸ್ತಾ ಎಂ ಅವರು ಉತ್ತಮ ಕೆಲಸಗಳನ್ನು ಮಾಡಿರುವುದರಿಂದ ಮತ್ತೆ ಎರಡನೇ ಅವಧಿಗೂ ಅಧ್ಯಕ್ಷರಾಗಿ ಆಯ್ಕೆ ಆಗಲು ಸಾಧ್ಯವಾಗಿರಬೇಕೆಂದು ಅಭಿಪ್ರಾಯಪಟ್ಟರು.
ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ರಾದ ಕೃಷ್ಣಮೂರ್ತಿ ಎನ್,ಮಾತನಾಡಿ,ವಕೀಲರ ವಕೀಲರ ಸಂಘದ ಸದಸ್ಯರೆಲ್ಲರನ್ನು ವಿಶ್ವಾಸಕ್ಕೆಪಡೆದು ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದು,ತನ್ನ ಮೂರು ವರ್ಷದ ಅವಧಿಯಲ್ಲಿ, ಬಂಟ್ವಾಳದಲ್ಲಿ ಯಾವುದೇ ಕೆಟ್ಟ ಅನುಭವ ಆಗಿಲ್ಲ ಎಂದು ಅವರು ತಿಳಿಸಿದರು.
ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ರಾಜೇಂದ್ರ ಪ್ರಸಾದ್ ಕೆ.ಎಸ್,ಮಾತನಾಡಿ ಕ್ರಿಯಾಶೀಲ ಸಂಘಟನೆಯ ಪದಾಧಿಕಾರಿಗಳಿಂದ ಉತ್ತಮ ಕೆಲಸದ ನಿರೀಕ್ಷೆ ಮಾಡಬಹುದಾಗಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘ (ರಿ ) ಅಧ್ಯಕ್ಷರಾದ ರಿಚಾರ್ಡ್ ಕೋಸ್ತಾ ಅವರು ವಹಿಸಿ ಅವರು ಮಾತನಾಡಿ,ಮಂಗಳೂರಿನಲ್ಲಿಹೈ ಕೋರ್ಟು ಪೀಠ ಸ್ಥಾಪನೆ ವಿಚಾರದ ಹೋರಾಟಕ್ಕೆ ವೇಗ ನೀಡುವಲ್ಲಿ ವಕೀಲ ಮಿತ್ರರ ಸಹಕಾರ ಯಾಚಿಸಿದರು.
ಎರಡನೇ ಅವಧಿಗೆ ಅಧ್ಯಕ್ಷನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್.ಎನ್. ನಾಯಕ್, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಅವರು ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.
ನೂತನ ಜೊತೆ ಕಾರ್ಯದರ್ಶಿ ಅಕ್ಷತಾ ಶೆಟ್ಟಿ, ಕೋಶಾಧಿಕಾರಿ ಜೆಸಿಂತಾ ಕ್ರಾಸ್ತಾ ವೇದಿಕೆಯಲ್ಲಿದ್ದರು.
ನೂತನ ಪ್ರದಾನ ಕಾರ್ಯದರ್ಶಿ ಕೆ ನರೇಂದ್ರನಾಥ ಭಂಢಾರಿ ಪ್ರಸ್ತಾವಿಸಿ, ಸ್ವಾಗತಿಸಿದರು. ಉಪಾಧ್ಯಕ್ಷ ದಯಾನಂದ ರೈ ವಂದಿಸಿದರು. ವಕೀಲರಾದ ಅಭಿನಯ ಚಿದಾನಂದ ಹಾಗೂ ವೀರೇಂದ್ರ ಎಂ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ಕಿರಿಯ ವಕೀಲ ಮಿತ್ರರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ವಕೀಲರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
