ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಸಮೂಹ ವಿದ್ಯಾಸಂಸ್ಥೆ ವಿದ್ಯಾಗಿರಿ ಬಂಟ್ವಾಳ ಇದರ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.ಯೋಗ ತರಬೇತುದಾರರಾದ ಚನ್ನಕೇಶವ ಡಿ.ಆರ್ ರವರು ಮಾತನಾಡಿ,ಮನುಷ್ಯನ ಸಾಧನೆಗೆ ಏಕಾಗ್ರತೆ ಆತ್ಯಮೂಲ್ಯ. ಯೋಗಾಭ್ಯಾಸದಿಂದ ವೈಯಕ್ತಿಕ ಹಾಗೂ ಸಾಮಾಜಿಕ ಜೀವನ ಬಲಗೊಳಿಸಲು ಸಾಧ್ಯವಿದೆ ಎಂದರು.

ವೇದಿಕೆಯಲ್ಲಿ ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ, ಬಿ.ಆರ್.ಎಮ್.ಪಿ.ಸಿ. ಪಬ್ಲಿಕ್ ಶಾಲೆ ಪ್ರಾಂಶುಪಾಲೆ ಪೂರ್ಣೇಶ್ವರಿ ಭಟ್, ಎಸ್.ವಿ.ಎಸ್. ಆಂಗ್ಲಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯ ಹರಿಪ್ರಸಾದ್ ಉಪಸ್ಥಿತರಿದ್ದರು.

ಶ್ರೀ ವೆಂಕಟರಮಣ ಸ್ವಾಮಿ ಸಮೂಹ ವಿದ್ಯಾಸಂಸ್ಥೆಗಳ ಉಪನ್ಯಾಸಕರು, ಅಧ್ಯಾಪಕೇತರ ವರ್ಗದವರು ಹಾಜರಿದ್ದರು. ಎಸ್.ವಿ.ಎಸ್. ಕಾಲೇಜು ಎನ್.ಸಿ.ಸಿ ವಿದ್ಯಾರ್ಥಿಗಳು ಮತ್ತು ಶ್ರೀ ವೆಂಕಟರಮಣ ಸ್ವಾಮಿ ಸಮೂಹ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯೋಗ ತರಬೇತುದಾರ ಚನ್ನಕೇಶವ ಡಿ.ಆರ್ ರವರು ವಿವಿಧ ಆಸನಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು
ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರದೀಪ್ ಪೂಜಾರಿ ಸ್ವಾಗತಿಸಿದರು. ಎಸ್.ವಿ.ಎಸ್. ಆಂಗ್ಲಮಾಧ್ಯಮ ಶಾಲೆ ಎನ್.ಸಿ.ಸಿ. ಅಧಿಕಾರಿ ರವಿ ವಂದಿಸಿದರು, ಜ್ಯೂನಿಯರ್ ಅಂಡರ್ ಆಫಿಸರ್ ಸ್ಫೂರ್ತಿ ಕಾರ್ಯಕ್ರಮ ನಿರೂಪಿಸಿದರು.
